ಸೈದಾಪುರ: ‘ಶ್ರಮದಿಂದ ಗಳಿಸಿದ ಹಣ, ಆಸ್ತಿ ಸಂಪತ್ತನ್ನು ಖರ್ಚು ಮಾಡಿ ಖಾಲಿ ಮಾಡಬಹುದು, ಅದನ್ನು ಬೇರೆಯವರು ದೋಚಬಹುದು. ಆದರೆ, ಜ್ಞಾನವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ’ ಎಂದು ಶಿಕ್ಷಕ ಬಸವರಾಜ ಚಂದ್ರಗಿರಿ ಹೇಳಿದರು.

ಸಮೀಪದ ಬಾಡಿಯಾಳ ಗ್ರಾಮದ ಗ್ರಾಮ ಪಂಚಾಯಿತಿ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿ, ‘ಮಕ್ಕಳ ಶೈಕ್ಷಣಿಕ ಬೆಳವಣಿಗೆ ಜೊತೆಗೆ ಅವರಿಗೆ ಸಂಸ್ಕಾರ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು’ ಎಂದು ಹೇಳಿದರು.

ಇದಕ್ಕೂ ಮೊದಲು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಿಬಿರದಲ್ಲಿ ಮಕ್ಕಳಿಗೆ ತಮ್ಮನ್ನು ತಾವು ಸ್ವಯಂ ಪರಿಚಯಿಸಿಕೊಳ್ಳುವ ಬಾಲ್ ಪಾಸಿಂಗ್ ಗೇಮ್ ಆಡಿಸಲಾಯಿತು.

ಕಾ ಅಧ್ಯಕ್ಷತೆಯನ್ನು ಲಿಂಗಣ್ಣಗೌಡ ಪೊಲೀಸ್ ಪಾಟೀಲ ವಹಿಸಿದ್ದರು. ಗ್ರಾ.ಪಂ ಕಾರ್ಯದರ್ಶಿ ಅಬ್ದುಲ್ ಬಾಷಾ, ಕಲಿಕಾ ಪ್ರೇರಕರಾದ ವೇಕಟೇಶ ಕಾವಲಿ, ಗ್ರಾ.ಪಂ ಕರವಸೂಲಿಗಾರ ಮರೆಪ್ಪ ಮಕ್ತಲ್, ವೆಂಕಟೇಶ ಕಾವಲಿ, ಮರೆಪ್ಪ ಮಕ್ತಾಲ್ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-30-432190626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.