ಸಾಲಿಗ್ರಾಮ: ‘ದೇಶದ ಜನರಿಗೆ ಸಮಾನತೆ, ಸ್ವಾತಂತ್ರ್ಯಮತ್ತು ಭ್ರಾತೃತ್ವವನ್ನು ಸಮಾನವಾಗಿ ಹಂಚುವ ಮೂಲಕ ಆಧುನಿಕ ಭಾರತವನ್ನು ಕಟ್ಟಿದ ಮಹಾಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಅವರು ದೇಶದ ಅಸ್ಮಿತೆ’ ಎಂದು ತಹಶೀಲ್ದಾರ್ ರುಕಿಯಾಬೇಗಂ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದರು.

‘ದೇಶದ ಪ್ರತಿಯೊಬ್ಬ ಪ್ರಜೆ ಇಂದಿಗೂ ನೆಮ್ಮದಿಯ ಬದುಕು ಕಟ್ಟಿಕೊಂಡು ತಮ್ಮ ಪಾಲಿನ ಹಕ್ಕುಗಳನ್ನು ಯಾವುದೇ ಆತಂಕ ಇಲ್ಲದೆ ಅನುಭವಿಸುವಂತೆ ಮಾಡಿರುವ ಅಂಬೇಡ್ಕರ್ ಅವರ ಶ್ರಮ ಹಾಗೂ ತ್ಯಾಗವನ್ನು ಯಾರೂ ಮರೆಯಬಾರದು’ ಎಂದು ತಿಳಿಸಿದರು.

‘ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿದ್ದು, ಇದನ್ನು ನಮ್ಮ ಯುವ ಪೀಳಿಗೆ ಅನುಸರಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

‘ಶಿಕ್ಷಣದ ಮೂಲಕವೇ ಸಮಾಜದ ಬದಲಾವಣೆ ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದ ಬಾಬಾ ಸಾಹೇಬರ ಆಶಯಗಳನ್ನು ಯುವ ಪೀಳಿಗೆ ಅರ್ಥ ಮಾಡಿಕೊಂಡು ಅನುಸರಿಸಲು ಮುಂದಾ ಗಬೇಕು’ ಎಂದು ಮನವಿ ಮಾಡಿದರು.

ಉಪ ತಹಶೀಲ್ದಾರ್ ಮಿರ್ಲೆ ಮಹೇಶ್, ಶಿರಸ್ತೇದ್ದಾರ್ ತಿಮ್ಮಯ್ಯ, ದಲಿತ ಸಂಘದ ಮುಖಂಡರಾದ ಕಂಠಿಕುಮಾರ್, ಕಳ್ಳಿಮುದ್ದನಹಳ್ಳಿ ಚಂದ್ರು, ಮೂರ್ತಿ, ಪುರಿಗೋವಿಂದ, ಭೇರ್ಯ ಕೃಷ್ಣ, ಪ್ರಭಾಕರ್, ದೊಡ್ಡಕೊಪ್ಪಲು ಮೀನು ಶಿವು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-38-1426799210

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.