ಸಂಡೂರು: ‘ಇತಿಹಾಸವು ಕೇವಲ ಕಲ್ಪನೆಯಲ್ಲ. ಅದು ಪುರಾವೆಗಳ ಆಧಾರದ ಮೇಲೆ ನಿಂತಿರುವ ಸತ್ಯ. ನೈಜ ಇತಿಹಾಸದ ಆಳವಾದ ಅಧ್ಯಯನಕ್ಕೆ ಪುರಾತತ್ವ ಶಾಸ್ತ್ರವೇ ಭದ್ರವಾದ ಆಸರೆ’ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪುರಾತತ್ವ ಸಂಗ್ರಹಾಲಯದ ಸಹಾಯಕ ಡಾ. ಮಂಜನಾಯ್ಕ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಅಲ್ಯುಮ್ನಿ ಅಸೋಸಿಯೇಷನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಪುರಾತತ್ವ ಅವಶೇಷಗಳ ಸಂರಕ್ಷಣೆ ಮತ್ತು ಉತ್ಖನನದ ವಿಧಿ ವಿಧಾನಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮಣ್ಣಿನ ಪದರಗಳಲ್ಲಿ ಅಡಗಿರುವ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಹೊರತೆಗೆಯುವ ಮೂಲಕ ಗತಕಾಲದ ಸಂಸ್ಕೃತಿ ಮರುಸೃಷ್ಟಿಸಬಹುದು. ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ಸಂರಕ್ಷಣಾ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಹೊಂದಿರಬೇಕು’ ಎಂದರು.

ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಎಚ್.ತಿಪ್ಪೇಸ್ವಾಮಿ ಮಾತನಾಡಿದರು. ಉಪನ್ಯಾಸಕರಾದ ಶಶಿಧರ್, ವಿರೂಪಾಕ್ಷಪ್ಪ ಎಂ., ನರಸಿಂಹಮೂರ್ತಿ ಟಿ.ಎಸ್., ಮಕ್ಬೂಲ್ ಬೇಗಂ, ಮಲ್ಲಯ್ಯ, ಗುಡ್ಡಪ್ಪ, ಶಿವಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-25-399858429

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.