ಸಂತೇಬೆನ್ನೂರು: ‘ಇಲ್ಲಿನ ಸರ್ಕಾರಿ ಪದವಿ ಕಾಲೇಜು ಗ್ರಂಥಾಲಯ ಕೊಠಡಿ ನಿರ್ಮಾಣಕ್ಕಾಗಿ ₹ 1.75 ಕೋಟಿ ಹಾಗೂ ಇತರೆ ಅಭಿವೃದ್ಧಿಗಳಿಗೆ ₹ 50 ಲಕ್ಷ ಹೆಚ್ಚುವರಿ ಅನುದಾನ ನೀಡಲಾಗಿದೆ’ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕಲಿಕಾ ಗುಣಮಟ್ಟ ಸುಧಾರಣೆಗೆ ಪದವಿ ಕಾಲೇಜಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಗುಣಮಟ್ಟದ ಬೋಧನೆ ಹಾಗೂ ಸೃಜನಾತ್ಮಕ ಚಟುವಟಿಕೆಗಳಿಂದ ದಾಖಲಾತಿ ಪ್ರಗತಿ ಕಂಡಿದೆ. ತ್ವರಿತಗತಿಯಲ್ಲಿ ಬದಲಾಗುತ್ತಿರುವ ಜಗತ್ತಿಗೆ ಅವಶ್ಯಕ ಶೈಕ್ಷಣಿಕ ಕೌಶಲ ಇಂದಿನ ಅಗತ್ಯ. ಸೂಕ್ಷ್ಮವಾಗಿ ಅವಲೋಕಿಸಿ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸಿಗೆ ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು. ಕಾಲಹರಣ ಮಾಡದೇ ನಿರಂತರ ಅಭ್ಯಾಸಗಳಿಂದ ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದರು.

‘ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸಾಮಾಜಿಕ ಸಮಸ್ಯೆ ಎದುರಿಸುವ ಶಕ್ತಿ ಸಹಜವಾಗಿ ಬಂದಿರುತ್ತದೆ. ಉನ್ನತ ವ್ಯಾಸಂಗ ಮಾಡಿದರೆ ಜ್ಞಾನ ಸಂಪಾದನೆ ಹಾಗೂ ಉದ್ಯೋಗಾವಕಾಶ ದೊರೆಯುತ್ತವೆ’ ಎಂದು ಉಪನ್ಯಾಸಕ ಎಂ. ಹಾಲಪ್ಪ ಹೇಳಿದರು.

ಸಿಡಿಸಿ ಕಾರ್ಯಾಧ್ಯಕ್ಷ ಎಂ.ಸಿದ್ದಪ್ಪ, ಪ್ರಾಂಶುಪಾಲ ಎಸ್.ಸುರೇಶ್, ಸಿಡಿಸಿ ಸದಸ್ಯರಾದ ಡಿ.ಬಸವರಾಜಪ್ಪ, ಕೆ.ಪಿ.ಗಿರೀಶ್, ನಾಗರಾಜ್, ಬಿ.ಸಿ.ಬಸವರಾಜ್, ಜಿ.ಎನ್.ಸುರೇಶ್, ರಹಮತ್ ಉಲ್ಲಾ, ಬಾಲು, ಮಲ್ಲಯ್ಯ, ವಿಜಯಕುಮಾರ್, ಉಪನ್ಯಾಸಕರಾದ ಜ್ಯೋತಿ, ರಾಜಶೇಖರ್, ದಿವ್ಯಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-43-813720640

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.