ಸಂತೇಬೆನ್ನೂರು: ಇಲ್ಲಿನ ಶ್ರೀಶೈಲ ವಾಗೀಶ ಪಂಡಿತಾರಾಧ್ಯ ಕರ್ನಾಟಕ ಪಬ್ಲಿಕ್ ಶಾಲೆ ಗ್ರಾಮೀಣ ಭಾಗದ ವಿದ್ಯಾಕಾಶಿ ಎಂದೇ ಪ್ರಸಿದ್ಧ. ವಿಶಾಲವಾದ ಆಟದ ಮೈದಾನ, ಕಟ್ಟಡಗಳ ಸಮೂಹ, ಗುಣಮಟ್ಟದ ಶಿಕ್ಷಣದಿಂದ ಜನ ಮಾನಸದಲ್ಲಿ ನೆಲೆನಿಂತಿದೆ. ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ಹಿರಿಮೆಯೂ ಶಾಲೆಗಿದೆ. ಇದೀಗ ಗೋಡೆ, ಕಾಂಪೌಂಡ್ಗಳ ಮೇಲೆ ಚಿತ್ತಾಕರ್ಷಕ ವರ್ಲಿ ಚಿತ್ರಕಲೆ ಮೂಲಕ ಮಕ್ಕಳ ಕುತೂಹಲವನ್ನು ವಿಸ್ತರಿಸುವ ಮತ್ತೊಂದು ಆಯಾಮದೊಂದಿಗೆ ಗಮನ ಸೆಳೆಯುತ್ತಿದೆ.

ಶಾಲೆಯ ಅಂದಾಜು 3,000 ಚದರ ಮೀಟರ್ ವಿಸ್ತೀರ್ಣದ ಗೋಡೆಗಳ ಮೇಲೆ ವರ್ಲಿ ಚಿತ್ರಕಲೆ ಅರಳುತ್ತಿದೆ. ಹೊರಭಾಗದ 300 ಮೀಟರ್ ಕಾಂಪೌಂಡ್ ವೈವಿಧ್ಯಮಯ ಚಿತ್ರಗಳಿಂದ ಗಮನ ಸೆಳೆಯುತ್ತಿದೆ. ಕಂದು ಹಾಗೂ ಬಿಳಿ ಬಣ್ಣಗಳ ಮಿಶ್ರಣದಿಂದ ಮೂಡಿದ ಅಭೂತಪೂರ್ವ ಚಿತ್ರಗಳು ಶಾಲಾ ಆವರಣದ ಮೆರುಗು ಹೆಚ್ಚಿಸಿವೆ.

ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದ 35 ವಿದ್ಯಾರ್ಥಿಗಳ ‘ಕುಂಚಕಲೆ’ ಇಲ್ಲಿ ಅನಾವರಣಗೊಂಡಿದೆ. ಕೆಪಿಎಸ್ ಆವರಣದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ (ಎನ್ಎಸ್ಎಸ್) ಭಾಗವಾಗಿ ಕೈಗೊಂಡ ಚಿತ್ರಕಲೆ ಚಟುವಟಿಕೆಯಿಂದ ಗೋಡೆಗಳು ಜೀವ ತಳೆಯುತ್ತಿವೆ. ಒಂದು ವಾರ ಅವಧಿಯ ಶಿಬಿರದಲ್ಲಿ ಇತರೆ ಚಟುವಟಿಕೆಗಳ ಜೊತೆ ವರ್ಲಿ ಚಿತ್ರ ಬಿಡಿಸುವ ಕಾರ್ಯವನ್ನೂ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕೈಗೊಂಡಿದ್ದಾರೆ ಎನ್ನುತ್ತಾರೆ ಉಪ ಪ್ರಾಚಾರ್ಯ ಯು.ಸಿದ್ದೇಶಿ.

ವಿಜ್ಞಾನ, ಇತಿಹಾಸ, ಪ್ರಕೃತಿ, ಪರಿಸರ ಸಂರಕ್ಷಣೆ, ವಿದ್ಯುತ್ ಅವಘಡ, ರಸ್ತೆ ಸುರಕ್ಷತೆ, ಕಲೆ, ಸಾಹಿತ್ಯ, ಸ್ಥಳೀಯ ಐತಿಹಾಸಿಕ ನೆಲೆಗಳು, ಸ್ಮಾರಕಗಳು, ವನ್ಯ ಜೀವಿಗಳನ್ನೊಳಗೊಂಡ ನೂರಕ್ಕಿಂತ ಹೆಚ್ಚು ಚಿತ್ರಗಳು ಕಣ್ಮನ ಸೆಳೆಯುತ್ತಿವೆ ಎನ್ನುತ್ತಾರೆ ಶಿಕ್ಷಕರಾದ ಎಲ್.ಮಲ್ಲೇಶ್, ಎಂ.ಬಿ.ನಾಗರಾಜ್.

ವರ್ಲಿ ಕಲೆ ಅಲಂಕಾರ ಮಾತ್ರವಲ್ಲ. ಅದು ನಾವು, ನಮ್ಮ ಪ್ರಕೃತಿ, ನಮ್ಮ ಒಗ್ಗಟ್ಟು' ಸಾರುವ ಕಥನ. ಕೆಪಿಎಸ್ ಶಾಲೆಯ ಪ್ರತಿ ಗೋಡೆಗಳೂ ಈಗ ಕಥೆ ಹೇಳುವ ಪುಸ್ತಕಗಳಾಗಿವೆ. ಶಾಲಾರಂಭದಲ್ಲಿ ವಿದ್ಯಾರ್ಥಿಗಳ ಜತೆ ಗೋಡೆಗಳು ಮಾತಾಡುತ್ತವೆ
ಎಚ್.ಎನ್.ರವಿ., ಮುಖ್ಯ ಶಿಕ್ಷಕ

'ವಿದ್ಯಾರ್ಥಿಗಳಿಗೆ ಬುಡಕಟ್ಟು ಕಲೆಯ ಪರಿಚಯ'

'ಮಹಾರಾಷ್ಟ್ರದ ವರ್ಲಿ ಬುಡಕಟ್ಟಿನಿಂದ ಹುಟ್ಟಿದ ಚಿತ್ರಕಲೆಯೇ 'ವರ್ಲಿ'. ಇದು ವಿದ್ಯಾರ್ಥಿಗಳಿಗೆ ತಮ್ಮ ಪಠ್ಯದಾಚೆಯ ಕಲಿಕೆಯೂ ಆಗಿದೆ. ಅವರಿಗೆ ನಮ್ಮ ಬುಡಕಟ್ಟು ಕಲೆಯನ್ನು ಪರಿಚಯಿಸುವ ಮೂಲಕ ಸಾಂಸ್ಕೃತಿಕ ಬೆಸುಗೆಯೂ ಏರ್ಪಡುತ್ತದೆ' ಎನ್ನುತ್ತಾರೆ ದೃಶ್ಯಕಲಾ ಕಾಲೇಜಿನ ಪ್ರಾಧ್ಯಾಪಕ ನವೀನ್ ಕುಮಾರ್.

ಕಡಿಮೆ ಖರ್ಚಿನಲ್ಲಿ ಹೆಚ್ಚು ಅಂದವಾಗಿ ಕಾಣುವಂತೆ ಮಾಡಲು ವರ್ಲಿ ಕಲೆ ಸೂಕ್ತ ಆಯ್ಕೆ. ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು ತಾವು ಕಲಿತ ಕೌಶಲವನ್ನು ಪ್ರದರ್ಶಿಸಲು ಇಲ್ಲಿ ಸೂಕ್ತ ವೇದಿಕೆ ಲಭಿಸಿದೆ. ವಿದ್ಯಾರ್ಥಿಗಳು ಚಿತ್ರಗಳ ಮೇಲೆ ಕೈಯಾಡಿಸಿದರೆ ನಮ್ಮ ಶಾಲೆ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ಭಾಗವಾಗಿ ಉಚಿತವಾಗಿ ವರ್ಲಿ ಚಿತ್ರಕಲೆಯನ್ನು ಗೋಡೆಗಳ ಮೇಲೆ ಚಿತ್ರಿಸಲಾಗುತ್ತಿದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.