ಸರಗೂರು: ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ, ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಬಿಡಗಲು ಪಡುವಲು ವಿರಕ್ತಮಠದ ಮಹದೇವ ಸ್ವಾಮೀಜಿ ಹೇಳಿದರು.

ಪಟ್ಟಣದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಶಿವಾರ್ಚಕ ಸಂಘದ ನಿವೇಶನದಲ್ಲಿ ಬುಧವಾರ ಶಿವಾರ್ಚಕ ಸಂಘದಿಂದ ನಡೆದ 15 ದಿನಗಳ ಶೈವಾಗಮ ರೀತ್ಯಾ ಅರ್ಚಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

‘ಶಿಬಿರದಲ್ಲಿ ಕಲಿತ ವಿದ್ಯೆಯನ್ನು ಶಿಬಿರಾರ್ಥಿಗಳು ತಪ್ಪದೇ ಪಠಣ ಮಾಡಬೇಕು. ಗುರುಗಳು ಹೇಳಿದ ವಿದ್ಯೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಸ್ವಸ್ಥ ಸಮಾಜ ಕಟ್ಟಲು ಶಿಕ್ಷಣ, ಸಂಸ್ಕಾರ ಮುಖ್ಯವಾಗಿದ್ದು, ಅದರಿಂದ ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯ’ ಎಂದರು.

ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ನಟರಾಜ ಸ್ವಾಮೀಜಿ ಮಾತನಾಡಿ, ‘ಕಲಿಯುವ ಕ್ರಮದಿಂದ ಮಕ್ಕಳು ಆಧ್ಯಾತ್ಮಿಕವಾಗಿ ಗಟ್ಟಿಯಾಗಲು ಸಾಧ್ಯ’ ಎಂದರು.

ರಾಜ್ಯ ಕಾಲೇಜು ಅಧ್ಯಾಪಕರ ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ‘ಶಿವಾರ್ಚಕ ಸಮುದಾಯ ಸಾಂಸ್ಕೃತಿಕವಾಗಿ ಹಿನ್ನಲೆಯುಳ್ಳದ್ದು, ಮಲ್ಲಣ್ಣ ಅವರ ನೇತೃತ್ವ ಈ ಕಾರ್ಯಕ್ರಮ ಸಮಾಜವನ್ನು ಒಗ್ಗೂಡಿಸುತ್ತದೆ. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವ ಕಾರ್ಯಕ್ರಮವಾಗಿದೆ’ ಎಂದರು.

ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿದರು. ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ವಿದ್ವಾನ್ ಎಂ.ಮಲ್ಲಣ್ಣ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಮಾತನಾಡಿದರು.

ಶಿವಾರ್ಚಕರನ್ನು ಅಭಿನಂದಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಅನುಪಮ ಹೋಟೆಲ್ ಮಾಲೀಕ ಎಸ್.ಬಿ.ನಂಜುಂಡಪ್ಪ, ರಾಜ್ಯ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಅಂಬಳೆ ಶಿವಣ್ಣ, ಬೋಳಪ್ಪ ಗುರೂಜಿ, ಸುರೇಶ್, ಮಾನವ ಹಕ್ಕುಗಳ ಹೋರಾಟಗಾರ ಭಜರಂಗಿ ಉಮೇಶ್, ಸುರೇಶ್, ಧಾರ್ಮಿಕ ದತ್ತಿ ತಹಶೀಲ್ದಾರ್ ಭಾಗ್ಯಮ್ಮ, ಇಒ ರಘು, ಚಿಕ್ಕದೇವಮ್ಮನ ಬೆಟ್ಟದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಶಾಂತಿಪುರ, ಉತ್ತನಹಳ್ಳಿ ದೇವಸ್ಥಾನದ ಮಹದೇವಪ್ರಸಾದ್, ಚಾಮುಂಡಿಬೆಟ್ಟದ ಮಂಜುನಾಥ್, ಅಮರೇಶ್ ಗುಡಿಯಾಳ್, ಗೌರವಾಧ್ಯಕ್ಷರಾದ ನಾಗರಾಜಪ್ಪ, ಸಿ.ನಾಗರಾಜು, ಸುಬ್ಬಣ್ಣ, ಕಾರ್ಯದರ್ಶಿ ವೀರಣ್ಣ, ಖಜಾಂಚಿ ಶಿವಕುಮಾರ್, ಸಲಹೆಗಾರರಾದ ಎನ್.ಮಹದೇವಸ್ವಾಮಿ, ಎಂ.ಎಸ್.ಜಗದೀಶ್, ನಂಜುಂಡಸ್ವಾಮಿ, ನಿರ್ದೇಶಕರಾದ ರವಿಶಾಸ್ತ್ರೀ, ಕೆ.ಜೆ.ಯಶವಂತ್, ನಂಜಪ್ಪ, ಎನ್.ಚಂದ್ರಪ್ಪ, ಸತೀಶ್, ಸುರೇಶ್, ಮಹದೇವಪ್ಪ, ನೀಲಕಂಠ, ನಟರಾಜು, ಸೋಮಣ್ಣ, ಮೇಘಾವತಿ ರಘುಕೀರ್ತಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-38-1070596070

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.