ಸಾಸ್ವೆಹಳ್ಳಿ: ಸಮೀಪದ ಬೀರಗೊಂಡನಹಳ್ಳಿ ಗ್ರಾಮದ ಅರಿವು ಕೇಂದ್ರದಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಆಯೋಜಿಸಲಾಗಿದ್ದ ‘ಬೆಂಕಿ ರಹಿತ ಅಡುಗೆ’ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಶಿಬಿರಾರ್ಥಿಗಳು ಮನೆಯಿಂದಲೇ ಬಗೆ ಬಗೆಯ ತರಕಾರಿ, ಹಣ್ಣು ಹಾಗೂ ಅಗತ್ಯ ಪದಾರ್ಥಗಳನ್ನು ತಂದು, ಬೆಂಕಿಯನ್ನು ಬಳಸದೆ ರುಚಿಕರವಾದ ಹಾಗೂ ಪೌಷ್ಟಿಕಾಂಶಯುಕ್ತ ತಿಂಡಿ- ತಿನಿಸುಗಳನ್ನು ತಯಾರಿಸಿದರು.

ಸಲಾಡ್ಗಳು, ವಿವಿಧ ಪಾನಕಗಳು ಹಾಗೂ ಪೌಷ್ಟಿಕ ಆಹಾರಗಳನ್ನು ಸಿದ್ಧಪಡಿಸುವ ಮೂಲಕ ಮಕ್ಕಳು ತಮ್ಮ ಸೃಜನಶೀಲತೆಯನ್ನು ಮೆರೆದರು. ಬೇಸಿಗೆಯ ಬಿಸಿಲ ನಡುವೆಯೂ ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ತಯಾರಿಸಿದ ಈ ಖಾದ್ಯಗಳು ಸಾರ್ವಜನಿಕರ ಮತ್ತು ಪೋಷಕರ ಅಪಾರ ಮೆಚ್ಚುಗೆಗೆ ಪಾತ್ರವಾದವು.

‘ಶಿಕ್ಷಣದ ಜೊತೆಗೆ ಇಂತಹ ಕೌಶಲ ಆಧಾರಿತ ಚಟುವಟಿಕೆಗಳು ಮಕ್ಕಳಲ್ಲಿ ಸ್ವಾವಲಂಬನೆಯ ಮನೋಭಾವವನ್ನು ಮೂಡಿಸುತ್ತವೆ’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜುಳಾಬಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಂಥಪಾಲಕಿ ಲಕ್ಷ್ಮೀ ಬಾಯಿ, ಸಿಬ್ಬಂದಿ ಶಿಲ್ಪಾ, ರಂಜಿತಾ, ರಮೇಶ್ , ಮಂಜುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-43-264468474

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.