ಸವದತ್ತಿ: ‘ರಕ್ತ ಸಂಗ್ರಹ, ಗುಣಮಟ್ಟದ ಸೇವೆ ಮತ್ತು ರಕ್ತದಾನದಿಂದ ಅಮೂಲ್ಯ ಜೀವ ಉಳಿಸುವುದರ ಜೊತೆಗೆ ಸಮಾಜ ಸೇವೆ ನಡೆಸಿದಂತಾಗುತ್ತದೆ. ರಕ್ತಕ್ಕೆ ಪರ್ಯಾಯವಿಲ್ಲದ ಕಾರಣ ಜೀವದ ಉಳಿವಿಗೆ ರಕ್ತದಾನವೇ ಜೀವಾಳವಾಗಿದೆ’ ಎಂದು ಪ್ರಾಂಶುಪಾಲ ಡಾ. ಮಾರುತಿ ಎಂ. ಹೇಳಿದರು.

ಇಲ್ಲಿನ ಕೆ.ಎಂ. ಮಾಮನಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್, ಜೈಂಟ್ಸ್, ರೇಣುಕಾ ಸಹೇಲಿ ಮತ್ತು ಜಿಲ್ಲಾ ರಕ್ತ ಭಂಡಾರಗಳಿಂದ ಬುಧವಾರ ಸವದತ್ತಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಬಾರಿ ನೀಡುವ ರಕ್ತದಿಂದ ಮೂವರ ಜೀವ ಉಳಿಸುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರೂ ರಕ್ತದ ಮಹತ್ವ ಅರಿತು, ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.

ಡಾ. ಮಂಜುನಾಥ ಚಲವಾದಿ ಮಾತನಾಡಿ, ‘ಜಾತ್ರೆ ಮತ್ತು ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ. ಅವು ಏಕತೆ, ಸಂತೋಷ ಮತ್ತು ಸಂಸ್ಕೃತಿಯ ಸಂಕೇತವಾಗಿವೆ’ ಎಂದರು.

ಶಿಬಿರದಲ್ಲಿ 25 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಡಾ. ಶಕುಂತಲಾ ಅಜ್ಜನ್ನವರ, ಡಾ ಜಾರ್ಜ್ ಎಂ., ಪಾರ್ವತಿ ಕಾಂತಿಮಠ, ಸೀಮಾ ವಣಕೆ, ಮಲ್ಲಿಕಾರ್ಜುನ ಅಂಗಡಿ, ಡಾ.ಎಂ.ಬಿ. ನಾಶಿಪುಡಿ, ಪ್ರೊ. ಶಿವಾನಂದ ಹಾಲೋಲಿ, ಡಾ. ಬಸವ ನಿಡಗುಂದಿ, ಎಂ.ಜಿ. ಪುರಾಣಿಕಮಠ, ಸೌಮ್ಯ ಸಿ., ಲಕ್ಷ್ಮಣ ಕಾಮಜಿ, ರುದ್ರಪ್ಪ ಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-21-1419993305

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.