ಸವದತ್ತಿ: ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಬಲಿಷ್ಠರಾಗಿ ಹೊರ ಹೊಮ್ಮಬೇಕೆಂಬುದನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜೀವಿಸಿ ತೋರಿಸಿದ್ದಾರೆ. ಅನ್ಯಾಯ, ಅಸಮಾನತೆ ಎದುರಿಸಿ ಪ್ರಬಲ ನಾಯಕರಾಗಿ ಹೊರಹೊಮ್ಮಿದರು. ಜಗತ್ತು ಮೆಚ್ಚುವ ಸಂವಿಧಾನ ನೀಡಿದ್ದಾರೆ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.

ಇಲ್ಲಿನ ಕೋಟೆ ಹತ್ತಿರದ ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ಜರುಗಿದ 135 ನೇ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪನ್ಯಾಸಕ ಉಮೇಶ ನರಗುಂದ ಮಾತನಾಡಿದರು.

ಇದಕ್ಕೂ ಮೊದಲು ಅಂಬೇಡ್ಕರ್ ನಗರದಿಂದ ಅಂಬೇಡ್ಕರ್ ಅವರ ಪ್ರತಿಮೆ ಮೆರವಣಿಗೆಯು ಆನಿ ಅಗಸಿ, ಬಜಾರ್, ಅಂಚೆ ಕಚೇರಿ ಮೂಲಕ ಸಾಗಿ ಉದ್ಯಾನವನ ತಲುಪಿತು.

ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ, ಪೌರಾಯುಕ್ತ ಸಂಗನಬಸಯ್ಯ, ಪಿಐ ಸುರೇಶ ಬೆಂಡೆಗುಂಬಳ, ಬಿಇಒ ಎ.ಎ. ಖಾಜಿ, ಎಚ್.ಎ. ಕದ್ರಾಪೂರಕರ, ಅಶೋಕ ಮುರಗೋಡ, ಶಿವಕುಮಾರ ರಾಠೋಡ, ಎಸ್.ವಿ. ಪಾಟೀಲ, ಆರ್.ಆರ್. ಕುಲಕರ್ಣಿ, ಯಲ್ಲಪ್ಪ ಗೊರವನಕೊಳ್ಳ, ರವಿ ದೊಡಮನಿ, ಜಗದೀಶ ಶಿರಸಂಗಿ, ಬಸವರಾಜ ಅರಮನಿ, ಮಂಜುನಾಥ ಪಾಚಂಗಿ, ಚಂದ್ರು ಹೀರೆಕೆಂಚಮ್ಮನವರ, ಯಲ್ಲಪ್ಪ ಬೇವಿನಗಿಡದ, ಸಂತೋಷ ಕಾಳೆ ಹಾಗೂ ಸಮಾಜದ ಪ್ರಮುಖರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-21-1449746890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.