ಸವದತ್ತಿ: ಅವಕಾಶ ಸಿಕ್ಕಾಗ ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಹಿಂಜರಿಯಬಾರದು ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರಣಮ್ಮ ಗೊರೆಬಾಳ ಹೇಳಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಬೆಳ್ಳುಬ್ಬಿ ಕಾಲೇಜಿನಲ್ಲಿ 2025-26 ನೆಯ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವೇದಿಕೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಮಗ್ರ ಸಾಧನೆ ಮಾಡಿದ ರವಿ ಹೊಳೆಯಣ್ಣವರ, ಮಧು ಶಿರಕೋಳ, ಸಹನಾ ಬಾರ್ಕಿ, ಮತ್ತು ಜಾವೆದ್ ನದಾಫ್ ಅತ್ಯುತ್ತಮ ವಿದ್ಯಾರ್ಥಿಗಳೆಂದು ಸನ್ಮಾನಿಸಲಾಯಿತು.

ಇದೇ ವೇಳೆ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ ಜಾವೇದ್ ನದಾಫ್, ಸರಸ್ವತಿ ಮಾದರ, ವಿಜಯ್ ಗಳಗಿನ್, ನಾಗರಾಜ ಗುಡಗಾರ, ಲಕ್ಷ್ಮಿ ದೇಸಾಯರ, ಪುಷ್ಪಾ ವಟ್ನಾಳ, ಪ್ರಿಯಾಂಕ ಭೋವಿ ಅವರಿಗೆ ನಗದು ಹಾಗೂ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಚೈತ್ರಾ ಶೆಟ್ಟೆಪ್ಪನವರ ಮತ್ತು ಜ್ಯೋತಿ ಬಾನಿ ಅವರನ್ನು ಸತ್ಕರಿಸಲಾಯಿತು.

ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಎ.ಎಫ್. ಬದಾಮಿ ಶೈಕ್ಷಣಿಕ ಸಾಧನೆಗಳ ವರದಿ, ಕ್ರೀಡಾ ವಿಭಾಗದ ನಿರ್ದೇಶಕ ಪ್ರೊ. ಶಿವಾನಂದ ಎಂ. ಹೊಳಿ ಕ್ರೀಡಾ ವರದಿ, ಬಿ.ಸಿ.ಎ. ವಿಭಾಗದ ವರದಿಯನ್ನು ಕಿರಣ ಲಮಾಣಿ, ಪ್ರೊ. ವಿ.ಎಸ್. ಮೀಶಿ ಕ್ರೀಡಾ ವಿಭಾಗದ ಬಹುಮಾನ ವಿಜೇತರ ಪಟ್ಟಿ, ಡಾ. ಎನ್.ಎ. ಕೌಜಗೇರಿ ಶೈಕ್ಷಣಿಕ ಸಾಧಕರ ಪಟ್ಟಿ, ಎ.ಎ.ಹಳ್ಳೂರ ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನಿತರ ಪಟ್ಟಿ, ಮೋಹನ್ ಬಿ.ಎನ್.ಎಸ್.ಎಸ್. ಸ್ವಯಂ ಸೇವಕರ ಪಟ್ಟಿ ಓದಿದರು.

ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಉಮೇಶ್ ಬಾಳಿ ಅಧ್ಯಕ್ಷತೆ ವಹಿಸಿದ್ದರು. ಐಶ್ವರ್ಯ ಗುಡೆನ್ನವರ ಪ್ರಾರ್ಥಿಸಿದರು, ಕ್ರೀಡಾ ವಿಭಾಗದ ಉಪಾಧ್ಯಕ್ಷ ಪ್ರೊ. ಕೆ.ರಾಮರೆಡ್ಡಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಡಾ. ಎನ್.ಆರ್. ಸವತೀಕರ, ವಿದ್ಯಾರ್ಥಿ ಪ್ರತಿನಿಧಿಗಳಾದ ಸರಸ್ವತಿ ಮಾದರ, ಪವಿತ್ರ ಪಾಟೀಲ, ಮಧು ಶಿರಕೋಳ ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-21-1855847396

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.