ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ: ಪ್ರೈಮ್ ಮಿನಿಸ್ಟರ್ ಸ್ಕಾಲರ್‌ಶಿಪ್ ಸ್ಕೀಮ್ 2021-22

Last Updated 13 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಪ್ರೈಮ್ ಮಿನಿಸ್ಟರ್ ಸ್ಕಾಲರ್‌ಶಿಪ್ ಸ್ಕೀಮ್ 2021-22

ವಿವರ: ಪ್ರೈಮ್ ಮಿನಿಸ್ಟರ್ ಸ್ಕಾಲರ್‌ಶಿಪ್ ಸ್ಕೀಮ್ 2021-22, ಮಾಜಿ ಸೈನಿಕರು / ಮಾಜಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳ ಅವಲಂಬಿತ ಮಕ್ಕಳು ಮತ್ತು ಮೃತರ ಪತ್ನಿಯರು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದಾರೆ.

ಅರ್ಹತೆ: ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 60 ಅಂಕಗಳೊಂದಿಗೆ 10+2 / ಡಿಪ್ಲೊಮಾ / ಡಿಗ್ರಿ ಪದವಿ ಹೊಂದಿರುವ ಮತ್ತು ವೃತ್ತಿಪರ ಪದವಿ ಕೋರ್ಸ್‌‌ನ ಮೊದಲ ವರ್ಷದಲ್ಲಿ (ಲ್ಯಾಟರಲ್ ಎಂಟ್ರಿ ಮತ್ತು ಇಂಟಿಗ್ರೇಟೆಡ್ ಕೋರ್ಸ್‌‌ಗಳನ್ನು ಹೊರತುಪಡಿಸಿ) ಪ್ರವೇಶ ಪಡೆದ ಭಾರತೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರುವರಿ 28, 2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ:www.b4s.in/praja/PMF1

ಐಐಟಿ ಗಾಂಧಿನಗರ್ ಫಿಸಿಕ್ಸ್ ಡಿಸಿಪ್ಲಿನ್ ಪೋಸ್ಟ್-ಡಾಕ್ಟರಲ್ ಫೆಲೋಶಿಪ್ 2022

ವಿವರ: ಐಐಟಿ ಗಾಂಧಿನಗರ್ ಫಿಸಿಕ್ಸ್ ಡಿಸಿಪ್ಲಿನ್ ಪೋಸ್ಟ್-ಡಾಕ್ಟರಲ್ ಫೆಲೋಶಿಪ್ (ಪಿಡಿಎಫ್) 2022, ಪಿಎಚ್‌ಡಿ ಪದವೀಧರರಿಗೆ ನೀಡುವ ಸಂಶೋಧನಾ ಅವಕಾಶವಾಗಿದೆ.

ಅರ್ಹತೆ: ‘ಸಾಫ್ಟ್-ಕಂಡೆನ್ಸ್ಡ್ ಮ್ಯಾಟರ್ ಫಿಸಿಕ್ಸ್‌’ನಲ್ಲಿ ತರಬೇತಿಯೊಂದಿಗೆ ಭೌತಶಾಸ್ತ್ರದಲ್ಲಿ ಅಥವಾ ವಿಜ್ಞಾನ / ಎಂಜಿನಿಯರಿಂಗ್‌ನ ಯಾವುದೇ ಸಂಬಂಧಿತ ಶಾಖೆಯಲ್ಲಿ ಪಿಎಚ್‌ಡಿ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಮುಕ್ತವಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರುವರಿ 28, 2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/GPP3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT