ಶಹಾಪುರ: ‘ಮಕ್ಕಳು ಕೊಡುವವರಾ ಗಬೇಕು, ಬೇಡುವವರಾಗಬಾರದು. ಸಮಾಜಕ್ಕೆ ದಾನಿಯಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಬದುಕಲು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು, ಆಡಳಿತ ಮಂಡಳಿ ಅವರು ಅವಕಾಶ ಕಲ್ಪಿಸಬೇಕು’ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು. ತಾಲ್ಲೂಕಿನ ಭೀಮರಾಯನಗುಡಿ ಹತ್ತಿರದ ದಿಗ್ವಿಜಯ ಇಂಟರ್ನ್ಯಾಶನಲ್ ಶಾಲೆಯ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಅವರು ಮಾತನಾಡಿದರು.

ಬಳಿಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ‘ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಿದ್ದು, ಅದರಂತೆ ಶಹಾಪುರ ತಾಲ್ಲೂಕಿನ ಹರಿಲಾಲ್ ರಾಠೋಡ ಎನ್ನುವ ಯುವಕ ಚಹಾಮಾರಿ ದಿಗ್ವಿಜಯ ಇಂಟರ್ನ್ಯಾಶನಲ್ ಶಿಕ್ಷಣ ಸಂಸ್ಥೆ ಕಟ್ಟಿರುವುದು ಖುಷಿಯ ವಿಚಾರ’ ಎಂದರು.

‘ನಾನು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದೇನೆ. ಬಹಳ ಕಷ್ಟ ನೋವು–ನಲಿವುಗಳ ಮಧ್ಯೆ ಶಿಕ್ಷಣ ಸಂಸ್ಥೆಗಳು ಮುನ್ನಡೆಸುತ್ತಿದ್ದೇನೆ. ಆದರೆ, ಸರ್ಕಾರದಿಂದ ಯಾವುದೇ ಅನುದಾನ ಬಂದಿರುವುದಿಲ್ಲ. ಪಾಲಕರು ಸಂಸ್ಥೆಗೆ ಉತ್ತಮ ಸಹಕಾರ ನೀಡಬೇಕು’ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹರಿಲಾಲ್ ರಾಠೋಡ, ಬಳಿರಾಮ ಮಹಾರಾಜ, ವರದಾನಂದೇಶ್ವರ ಸ್ವಾಮೀಜಿ, ಶಿವಲಿಂಗೇಶ್ವರ ಸ್ವಾಮೀಜಿ, ವಿಠ್ಠಲ ಮಹಾರಾಜರು, ತೇಜುಸಿಂಗ್ ಬೋನು ನಾಯಕ ಮಹಾರಾಜರು, ಡಿಡಿಪಿಐ ಚನ್ನಬಸಪ್ಪ ಮುಧೋಳ, ಬಿಇಒ ಹಣಮಂತ್ರಾಯ ಸೋಮಾಪುರ, ಶರಣು ಗದ್ದುಗೆ ಮತ್ತಿತರರು ಭಾಗವಹಿಸಿದ್ದರು.

ಹನುಮಂತ ಲಮಾಣಿ ಹಾಗೂ ರಮೇಶ ಲಮಾಣಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-30-1026986961

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.