ಶನಿವಾರಸಂತೆ: ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರದ ವತಿಯಿಂದ ಗ್ರಂಥಾಲಯದಲ್ಲಿ ಕಳೆದ 15 ದಿನಗಳಿಂದ ಹಮ್ಮಿಕೊಂಡಿದ್ದ ಚಿಣ್ಣರ ಮತ್ತು ವಿದ್ಯಾರ್ಥಿ ಓದುಗರ ಬೇಸಿಗೆ ಶಿಬಿರ ಮುಕ್ತಾಯಗೊಂಡಿತು.

ಈ ಶಿಬಿರದಲ್ಲಿ ಚಿಣ್ಣರಿಗಾಗಿ ಕಲೆ, ಸಾಹಿತ್ಯ, ಗ್ರಾಮೀಣ ಕ್ರೀಡೆ, ಜಾನಪದ ಗೀತೆ, ಸಂಗೀತ, ನೃತ್ಯ, ಗಾಯನ, ಸಂವಿಧಾನ ಪೀಠಿಕೆ ಮುಂತಾದ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.

ಅರಿವು ಕೇಂದ್ರದಲ್ಲಿ ಮಕ್ಕಳು ತಮ್ಮ ಕೈಚಳಕದಿಂದ ಲೈಬ್ರೆರಿ ಮಾಡೆಲ್, ಪ್ಲವರ್ ವಾಜ್, ಲೈಬ್ರೆರಿ ಟ್ರೆ, ನಿರುಪಯುಕ್ತ ತ್ಯಾಜ್ಯದಿಂದ ಕಲಾಕೃತಿ, ವಿವಿಧ ರೀತಿಯ ಚಿತ್ರಕಲೆಗಳನ್ನು ರಚಿಸಿ ಪ್ರದರ್ಶನಕ್ಕಿಟ್ಟಿದ್ದರು. ಬೇಸಿಗೆ ಶಿಬಿರಲ್ಲಿ ಚಿಣ್ಣರು ಪ್ರತಿದಿನ ಸಂಗೀತ, ಗಾಯನ, ಭಕ್ತಿಗೀತೆ, ಭಾವಗೀತೆ, ನೃತ್ಯ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.

ಅರಿವು ಕೇಂದ್ರದಲ್ಲಿ ನಡೆದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ದುಂಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ, ‘ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರತಿವರ್ಷವೂ ಮೇ ತಿಂಗಳಲ್ಲಿ ಗ್ರಂಥಾಲಯದ ಅರಿವು ಕೇಂದ್ರದಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ಮಕ್ಕಳನ್ನು ಗ್ರಂಥಾಲಯದೆಡೆಗೆ ತರುವುದು ಮತ್ತು ಶಿಬಿರದಲ್ಲಿ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಕಲೆ, ಸಾಹಿತ್ಯ ಸೇರಿದಂತೆ ಚಿತ್ರಕಲೆ, ಕ್ರೀಡೆ ಮುಂತಾದ ಚಟುವಟಿಕೆಯನ್ನು ನಡೆಸಲಾಗುತ್ತದೆ’ ಎಂದರು.

ಬೇಸಿಗೆ ಶಿಬಿರದ ಮಹತ್ವ ಕುರಿತು ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಳಿನಿ ನಾಗರಾಜ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಂಥಾಲಯ ಸಿಬ್ಬಂದಿ, ಓದುಗರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-51-221676398

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.