ಶಿಡ್ಲಘಟ್ಟ: ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಮಾತನಾಡಿ, ‘ನಗರ ಮಕ್ಕಳಿಗೆ ಇರುವಂತೆ ಗ್ರಾಮೀಣ ಮಕ್ಕಳಿಗೂ ಬೇಸಿಗೆಯಲ್ಲಿ ಮನರಂಜನೆ ಮತ್ತು ಕಲಿಕೆಯ ಅವಕಾಶ ಕಲ್ಪಿಸುವುದೇ ಈ ಶಿಬಿರದ ಉದ್ದೇಶ. ಮಕ್ಕಳ ವ್ಯಕ್ತಿತ್ವ ವಿಕಾಸ ಮತ್ತು ಸೃಜನಾತ್ಮಕತೆ ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾದ ಬೇಸಿಗೆ ಶಿಬಿರವು ಮಹತ್ವವಾದದ್ದು’ ಎಂದು ಹೇಳಿದರು.

15 ದಿನ ನಡೆಯುವ ಶಿಬಿರದಲ್ಲಿ ಮಕ್ಕಳಿಗೆ ಹಲವು ಬಗೆಯ ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳು ನಡೆಯಲಿವೆ. ನಿಯತಕಾಲಿಕೆ ಓದುವುದು, ಕಥೆ ಕಟ್ಟುವಿಕೆ, ಗಟ್ಟಿ ಓದು, ಪತ್ರ ಬರೆಯುವುದು, ಕಲಾತ್ಮಕ ಚಟುವಟಿಕೆಗಳಾದ ಕವನ ರಚನೆ, ಭಾಷಣ, ಕರಕುಶಲ ಕಲೆ, ಚೆಸ್, ಕೇರಂ, ವಾಲಿಬಾಲ್, ಕ್ರಿಕೆಟ್ ಮುಂತಾದ ಆಟಗಳು, ವಿಜ್ಞಾನ ಮತ್ತು ಗಣಿತ ಕಲಿಸುವ ಅಂಕಿ-ಸಂಖ್ಯೆ ಕೌಶಲ ಅಭಿವೃದ್ಧಿ, ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಕಪ್ಪೆಜಿಗಿತ, ಪೇಪರ್ ಕಟಿಂಗ್, ಮಿಮಿಕ್ರಿ, ಅಂತ್ಯಾಕ್ಷರಿ, ಮ್ಯೂಸಿಕಲ್ ಚೇರ್, ನೃತ್ಯ ಕಲಿಸಲಾಗುವುದು ಎಂದರು.

ಪಿಡಿಒ ಎಸ್.ಮಮತ, ಶಿಕ್ಷಣ ಸಂಯೋಜಕ ಮಂಜುನಾಥ, ಗ್ರಂಥಪಾಲಕ ಎಂ.ಜಿ.ಮುನಿನರಸಿಂಹ, ಮುಖ್ಯಶಿಕ್ಷಕಿ ಬಿ.ಮಂಜುಳಮ್ಮ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವೀಣಾ, ಸಿ.ಎ.ದ್ಯಾವಪ್ಪ, ಮಂಜುನಾಥ, ಅಂಗನವಾಡಿ ಕಾರ್ಯಕರ್ತೆ ಅನುಷಾ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-16-14659785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.