ಶಿಡ್ಲಘಟ್ಟ: ವಿದ್ಯಾರ್ಥಿಗಳು ಮತ್ತು ಯುವ ಜನರ ಮೇಲೆ ಈ ಸಮಾಜ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ನಿರೀಕ್ಷೆಗಳನ್ನು ಹುಸಿಗೊಳಿಸದೆ ಎಲ್ಲವನ್ನೂ ಸಾಕಾರಗೊಳಿಸುವ ನಿಟ್ಟಿನಲ್ಲಿ ಬದುಕು ಸಾಗಬೇಕು ಎಂದು ವಿಜಯಪುರದ ಗುರಪ್ಪಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಂಡಿಗನಾಳದ ವೀರಣ್ಣಸ್ವಾಮಿ ಕೆಂಪಣ್ಣಸ್ವಾಮಿ ದೇವಾಲಯ ಟ್ರಸ್ಟ್ ಹಂಡಿಗನಾಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 12ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೀರಣ್ಣ ಕೆಂಪಣ್ಣ ಈ ನೆಲದ ಸಾಂಸ್ಕೃತಿಕ ಪ್ರತಿನಿಧಿಗಳು, ರಾಯಭಾರಿಗಳು. ಧ್ವನಿ ಇಲ್ಲದವರ ಪರ, ಶೋಷಿತರ ಪರ ನಿಂತವರು ಮತ್ತು ಅವರ ತ್ಯಾಗ, ದಾನ ಧರ್ಮದ ಒಳ್ಳೆಯ ಚಿಂತನೆಗಳಿಂದ ಮತ್ತು ಹಾಗೆ ಬದುಕಿ ದೇವರ ಸ್ವರೂಪ ಪಡೆದವರು ಎಂದು ಹೇಳಿದರು.

ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಣ ಬದುಕನ್ನು ರೂಪಿಸುತ್ತದೆ. ಸ್ಪರ್ಧಾ ಯುಗದಲ್ಲಿ ಕೇವಲ ಶಿಕ್ಷಣ ಪಡೆದರಷ್ಟೆ ಸಾಲದು, ವೃತ್ತಿ ಕೌಶಲ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 120 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ, ನಗದು ನೀಡಿ ಪುರಸ್ಕರಿಸಲಾಯಿತು.

ಜ್ಯೋತಿಪುರ ಚಿರಾಗ್, ಸಾವುಕನಹಳ್ಳಿ ಲಾವಣ್ಯ, ಮೇಲೂರು ಡಾ.ವರಲಕ್ಷ್ಮಿ ನವೀನ್ಗೌಡ, ಮಲ್ಲೇನಹಳ್ಳಿ ಡಾ.ದಾಮಿನಿ, ಜಂಗಾಲಹಳ್ಳಿ ಜೆ.ಎನ್.ಮನೀಷ ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಮಾತನಾಡಿದರು. ಎನ್.ನಾಗರಾಜ್, ಬಿಳಿಶಿವಾಲೆ ರವಿ, ಅಶ್ವತ್ಥಯ್ಯ, ಮುನಿಸ್ವಾಮಿಗೌಡ, ರಾಮದಾಸ್, ಸ್ಕೂಲ್ ದೇವರಾಜ್, ಗೊರಮಡಗು ರಾಜಣ್ಣ, ಆನೂರು ವಿಜಯೇಂದ್ರ, ಡಾ.ನವೀನ್, ಸೌಭಾಗ್ಯ, ರಾಜಗೋಪಾಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-16-109733271

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.