ಶಿಗ್ಗಾವಿ: ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿರುವ, ಇಲ್ಲಿಯ ಆಶ್ರಯ ಕಾಲೊನಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯು ಮೂಲ ಸೌಕರ್ಯವಿಲ್ಲದೇ ನರಳುತ್ತಿದೆ.

8ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯು ಸ್ಥಾಪನೆಯಾಗಿ 20 ವರ್ಷ ಕಳೆದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಮೂಲ ಸೌಕರ್ಯಗಳ ಕೊರತೆ ನಡುವೆಯೂ ಶಾಲೆಯಲ್ಲಿ ಸುಮಾರು 200 ಮಕ್ಕಳು ಓದುತ್ತಿದ್ದಾರೆ.

ಪ್ರತಿ ವರ್ಷವೂ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಸುಮಾರು 200 ಮಕ್ಕಳಿಗೆ ಕೇವಲ 11 ಶಿಕ್ಷಕರಿದ್ದಾರೆ. ಆದರೂ ಪ್ರತಿ ವರ್ಷ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ.

‘ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಕನ್ನಡ ಭಾಷೆ ಬಳಕೆಯ ಜತೆಗೆ ಬೆಳವಣಿಗೆಯಾಗಬೇಕು’ ಎಂದು ವೇದಿಕೆಯಲ್ಲಿ ಭಾಷಣ ಮಾಡುವ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಶಾಲೆಯತ್ತ ಗಮನ ಹರಿಸದಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ಈ ಸರ್ಕಾರಿ ಪ್ರೌಢ ಶಾಲೆಯು ಪಟ್ಟಣದಿಂದ ಹೊರವಲಯದಲ್ಲಿದೆ. ಇದೇ ಕಾರಣಕ್ಕೆ ಅಭಿವೃದ್ಧಿಯಾಗುತ್ತಿಲ್ಲವೆಂಬ ಅಳಲು ಸ್ಥಳೀಯರದ್ದು.

ಶಾಲೆಗೆ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ಕು ಕಿಡಿಗೇಡಿಗಳು ಒಡೆದುಹಾಕಿದ್ದಾರೆ. ಶೌಚಾಲಯಗಳು ಮತ್ತು ಅಡುಗೆ ಕೊಠಡಿಗಳ ಬಾಗಿಲಗಳನ್ನು ಮುರಿದು ಹಾಕಿದ್ದಾರೆ. ರಾತ್ರಿ ವೇಳೆ ಕಿಡಿಗೇಡಿಗಳು ಶಾಲಾ ಕೊಠಡಿಗಳ ಮುಂದೆ ಕುಳಿತು ಮದ್ಯದ ಪಾರ್ಟಿ ಮಾಡಿ ಗಲೀಜು ಮಾಡುತ್ತಿದ್ದಾರೆ.

ಶಾಲೆ ಆವರಣದಲ್ಲಿ ನಿತ್ಯವೂ ಬೆಳಿಗ್ಗೆ ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಅರ್ಧ ತಿದ್ದು ಬಿಸಾಡಿದ ಆಹಾರ ಪೊಟ್ಟಣಗಳು, ಪಾನ ಬೀಡಾ ತಿದ್ದು ಉಗುಳಿರುವ ಕಲೆಗಳೇ ಕಣ್ಣಿಗೆ ರಾಚುತ್ತಿವೆ. ಅಲ್ಲದೆ, ಅಕ್ರಮ ಚಟುವಟಿಗಳು ಸಹ ನಡೆಯುತ್ತಿವೆ.

ಜ್ಞಾನ ನೀಡುವ ತಾಣದಲ್ಲಿ ಇಂತಹಅನೈತಿಕ ಚಟುವಟಿಕೆಗಳು ನಡೆಯುವುದುಪ್ರಜ್ಞಾವಂತ ಜನರ ತಲೆ ತಗ್ಗಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಶಾಲೆ ಉಳಿವಿಗೆ ಗಮನ ಹರಿಸಬೇಕು. ಇಲ್ಲದಿದ್ದರೆ, ಹೋರಾಟ ಆರಂಭಿಸುವುದಾಗಿ ಪೋಷಕರು ಎಚ್ಚರಿಸುತ್ತಿದ್ದಾರೆ.

‘ಶಾಲೆಗಳ ಕೊಠಡಿಗಳನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ಮೈದಾನದಲ್ಲಿನ ಸಸಿಗಳನ್ನು ಹಾಳು ಮಾಡಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮೆರಾ, ಶೌಚಾಲಯಗಳ ಬಾಗಿಲು ಮುರಿದು, ನೀರಿನ ಟ್ಯಾಂಕ್ ಕಳವು ಮಾಡಿದ್ದಾರೆ. ಶಾಲೆಗೆ ಪೊಲೀಸರು ಭದ್ರತೆ ನೀಡಬೇಕಿದೆ’ ಎಂದು ಸ್ಥಳೀಯ ನಿವಾಸಿ ಷಣ್ಮುಖಪ್ಪ ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-22-1779898633

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.