ಶಿಗ್ಗಾವಿ: ‘ರಕ್ತದಾನ ಶ್ರೇಷ್ಟವಾಗಿದ್ದು, ಜೀವ ಸಂಜೀವಿನಿ ಇದ್ದಂತೆ. ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಜೀವದಾನ ಮಾಡುವ ಪರೋಪಕಾರದ ಗುಣಗಳನ್ನು ಬೆಳಸಿಕೊಳ್ಳಬೇಕು. ರಕ್ತದಾನ ಮಾಡಿರುವ ವ್ಯಕ್ತಿಯ ಆರೋಗ್ಯ ಉತ್ತಮವಾಗಿರಲು ಸಾಧ್ಯ’ ಎಂದು ಜಿಲ್ಲಾ ಆಸ್ಪತ್ರೆ ರಕ್ತನಿಧಿ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಸಲಹೆ ನೀಡಿದರು.

ಪಟ್ಟಣದ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಯುವ ರೆಡ್ ಕ್ರಾಸ್, ಕನ್ನಡ ನುಡಿ ವೇದಿಕೆ, ರೋವರ್ಸ್ ಮತ್ತು ರೇಂಜರ್ಸ್, ಜಿಲ್ಲಾ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ , ಶಿಗ್ಗಾವಿ ರಕ್ತ ಶೇಖರಣಾ ಘಟಕದ ಸಹಯೋಗದಲ್ಲಿ ಶುಕ್ರವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಒಬ್ಬರು ಮಾಡುವ ರಕ್ತದಾನದಿಂದ ಮೂರು ಜನರ ಜೀವ ಉಳಿಸಬಹುದು. ರಕ್ತ ದಾನದಿಂದ ಸಂತೃಪ್ತಿ, ಹೃದಯದ ಆರೋಗ್ಯ, ಸಾಮಾಜಿಕ ಮನೋಭಾವ, ಹೊಸ ರಕ್ತಕಣಗಳ ಉತ್ಪತ್ತಿಯಂತಹ ಪ್ರಯೋಜನ ಪಡೆಯಲು ಸಾಧ್ಯ’ ಎಂದರು.

ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎ.ಸಿ. ವಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಳೆದ ಹತ್ತು ವರ್ಷಗಳಿಂದ ಈ ಕಾಲೇಜು ನಾಲ್ಕು ಸಾವಿರ ಜೀವಗಳನ್ನು ಉಳಿಸುವ ಕೆಲಸ ಮಾಡಿದೆ. ಇಂದಿನ ಶಿಬಿರದಲ್ಲಿ ಒಟ್ಟು 55 ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ದು, ವಿದ್ಯಾರ್ಥಿನಿಯರು ರಕ್ತದಾನ ಮಾಡಿದ್ದಾರೆ’ ಎಂದರು.

ಜಿಲ್ಲಾ ಆಸ್ಪತ್ರೆ ರಕ್ತನಿಧಿ ಆಪ್ತ ಸಮಾಲೋಚಕ ರೇವಣ್ಣ ತೆಂಬದ, ಪ್ರೊ.ಆನಂದ ಇಂದೂರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಆರ್.ಪಿ. ನದಾಫ್, ಮಹಂತೇಶ ಪಾಟೀಲ, ವಿನಯ ಕುಲಕರ್ಣಿ, ಡಿ.ಎಸ್. ಭಟ್ , ಡಿ.ಎಸ್. ಸೊಗಲದ, ಮೇಘ ಚಲವಾದಿ, ಅಂಬಿಳಿ ಪಿಳ್ಳೆ, ಮುತ್ತು ಸುಣಗಾರ, ಆರ್.ಪಿ.ನದಾಫ್, ಪ್ರಬಲ ರೋಡ್ಡಣ್ಣನವರ, ಸೌಭಾಗ್ಯ ದೊಡ್ಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-22-355560160

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.