ಶಿಗ್ಗಾವಿ : ಪುಸ್ತಕಗಳು ನಮಗೆ ಬೇಕೆ ಬೇಕು. ನಮ್ಮ ನೈತಿಕ ಮತ್ತು ಆದರ್ಶ ಜ್ಞಾನ, ಬುದ್ಧಿವಂತಿಕೆ, ಸೃಜನಶೀಲತೆ, ಸ್ಫೂರ್ತಿ ಹಾಗೂ ಮನರಂಜನೆ ನೀಡುತ್ತವೆ ಎಂದು ಸಾಹಿತಿ ಸಿ. ಎಸ್ ಮರಳಹಳ್ಳಿ ಹೇಳಿದರು.

ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ಮಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಹಯೋಗದಲ್ಲಿ ಪಟ್ಟಣದಲ್ಲಿ ಸೋಮವಾರ ನಡೆದ 'ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ'ದಲ್ಲಿ ಮಾತನಾಡಿದರು.

ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇದರಿಂದ ಅನಾರೋಗ್ಯಕರ ಬೆಳವಣಿಗೆ ಹೆಚ್ಚುತ್ತಿದೆ. ಇದು ಸಮಾಜಕ್ಕೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಮನೆಗೊಂದು ಪುಸ್ತಕ ಕಾರ್ಯಕ್ರಮದ ಜಿಲ್ಲಾ ಅಧ್ಯಕ್ಷ ಎಸ್.ಆರ್.ಹಿರೇಮಠ ಉದ್ಘಾಟನೆ ಮಾಡಿ ಪುಸ್ತಕಗಳಿಗೆ ದೊಡ್ಡ ಶಕ್ತಿ ಇದೆ. ಪುಸ್ತಕಗಳು ಓದುಗರ ಮನಸ್ಸನ್ನು ಚುರುಕುಗೊಳಿಸುತ್ತವೆ. ಮೆದುಳನ್ನು ಸೃಜನಶೀಲಗೊಳಿಸುತ್ತಿವೆ ಎಂದರು.

ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿದ ಅವರು, ಪುಸ್ತಕಗಳು ನಮಗೆ ಹೊಸ ಪ್ರಪಂಚವನ್ನು ಅನ್ವೇಷಣೆ ಮಾಡಲು ಅವಕಾಶ ಮಾಡಿಕೊಡುತ್ತವೆ. ವಿಶಾಲವಾದ ಮತ್ತು ಸುಸ್ಥಿರ ಅಭಿವೃದ್ಧಿಗೆ ಬೇಕಾದ ದೃಷ್ಟಿಕೋನಗಳನ್ನು ಬೆಳೆಸುತ್ತವೆ ಎಂದರು.

ಜಾನಪದ ವಿ.ವಿ.ಪ್ರಾಧ್ಯಾಪಕ ಚಂದ್ರಪ್ಪ ಸೊಬಟಿ ಮಾತನಾಡಿ, ಪುಸ್ತಕಗಳನ್ನು ಓದುವುದು ಜ್ಞಾನವನ್ನು ಪಡೆಯುವ ಪ್ರಮುಖ ಮಾರ್ಗಗಳಲ್ಲಿ ಒಂದು. ಪುಸ್ತಕಗಳು ಮನಸ್ಸನ್ನು ಹರಿತಗೊಳಿಸುತ್ತವೆ. ತಂತ್ರಜ್ಞಾನ ಓದಿನ ಮತ್ತು ಶಿಕ್ಷಣದ ವಿಧಾನವನ್ನು ಬದಲಾಯಿಸಿದೆ. ಭಾವನಾತ್ಮಕ ಸಂಬಂಧವನ್ನು ಬೆಳಸುತ್ತದೆ. ಪುಸ್ತಕಗಳು ರೂಪಕ ಪ್ರತಿಮೆ ಸೃಜನಶೀಲತೆಯನ್ನು ಹೆಚ್ಚುಹೆಚ್ಚಾಗಿ ಬೆಳಸುತ್ತವೆ ಎಂದರು.

ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಪ್ಪ ಬೆಂತೂರು ಮಾತನಾಡಿದರು

ಜಿಲ್ಲಾ ಜಾಗೃತಿ ಸಮಿತಿ ಆರಂಭಿಸಿದ ‘ಪುಸ್ತಕ ಜೋಳಿಗೆ‘ ಕಾರ್ಯಕ್ರಮಕ್ಕೆ ರಾಜಶ್ರೀ ಚಂದ್ರಪ್ಪ ಸೊಬಟಿ ಅವರು 51 ಪುಸ್ತಕಗಳನ್ನು ಕಾಣಿಕೆಯಾಗಿ ಕೊಟ್ಟರು.

ಇದೇ ವೇಳೆ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಸಾಹಿತಿ ಸತೀಶ್ ಕುಲಕರ್ಣಿ ಹಾಗೂ ರಾಜಶ್ರೀ ಚಂದ್ರಪ್ಪ ಸೊಬಟಿ ದಂಪತಿಗಳನ್ನು ಸನ್ಮಾನ ಮಾಡಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಸಿದ್ದೇಶ್ವರ ಹುಣಸೆಕಟ್ಟಿಮಠ, ಅನಿತಾ ಮಂಜುನಾಥ, ಗೀತಾ ಸುತ್ತಕೋಟಿ, ಸೋಮಣ್ಣ ಡೊಂಬರಮತ್ತೂರು, ಕರ್ನಾಟಕ ಜಾನಪದ ವಿ.ವಿ ಸಹಾಯಕ ಸಂಶೋಧನಾಧಿಕಾರಿ ಮಂಜು ಎಚ್, ಮೈಲಾರಿ ಮೂರುಮನಿ, ಲಕ್ಷ್ಮಿಕಾಂತ ಮಿರಜಕರ, ರಾಜಶ್ರೀ ಬ ಪಾಟೀಲ ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-22-369259324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.