ಶಿಗ್ಗಾವಿ: ಮನುಷ್ಯನ ಜ್ಞಾನ ವಿಕಾಸಕ್ಕೆ ಓದುವ ಹವ್ಯಾಸ ಹೆಚ್ಚಾಗಬೇಕು. ಅದರಿಂದ ಸದೃಢ ಹಾಗೂ ಪ್ರಜ್ಞಾವಂತರ ನಾಡು ನಿರ್ಮಾಣವಾಗುತ್ತದೆ. ಹೀಗಾಗಿ ಮಕ್ಕಳಿಗೆ ಬಾಲ್ಯದಲ್ಲಿ ಓದುವ ಗಿಳು ಹಚ್ಚುವ ಕಾರ್ಯ ನಮ್ಮದಾಗಬೇಕು. ಅದಕ್ಕಾಗಿ ಪುಸ್ತಕ ಪ್ರಾಧಿಕಾರ ವಿಶೇಷ ಕಾರ್ಯಕ್ರಮ ಕೈಗೊಂಡುದ್ದು, ಪ್ರತಿಯೊಬ್ಬರು ಅದರಲ್ಲಿ ಪಾಲ್ಗೊಂಡು ಅದರ ಮೂಲ ಉದ್ದೇಶ ಈಡೇರಲಿ ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ಗೀತಾ ಸುತ್ತಕೋಟಿ ಹೇಳಿದರು.

ತಾಲ್ಲೂಕಿನ ಗೂಟಗೋಡಿ ಉತ್ಸವ ರಾಕ್ ಗಾರ್ಡ್ನ್ನಲ್ಲಿ ಮಂಗಳವಾರ ಬೆಂಗಳೂರ ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಹಯೋಗದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಮನೆ ಮನೆಗಳಲ್ಲಿ ಒಂದು ಗ್ರಂಥಾಲಯ ಅನುಷ್ಟಾನಗೊಳ್ಳಬೇಕು. ಮಕ್ಕಳ ಭಾವನೆ ಪುಸ್ತಕಗಳತ್ತ ಸಾಗಬೇಕು. ಮೊಬೈಲ್ ಹಾವಳಿ ತಡೆಯಬೇಕು. ಭಾರತೀಯ ಮೂಲ ಸಂಸ್ಕಾರ, ಸಂಸ್ಕೃತಿಗಳು ಉಳಿಸಿ ಬೆಳಸಬೇಕು. ಅಂತಹ ಚಿಂತನೆಗಳನ್ನು ಯುವಕರಲ್ಲಿ ಬಿತ್ತುವ ಕಾರ್ಯ ಅಗತ್ಯವಾಗಿದೆ ಎಂದರು.

ರಾಕ್ ಗಾರ್ಡನ್ ಮುಖ್ಯಸ್ಥೆ ವೇದಾರಾಣಿ ದಾಸನೂರ ಮಾತನಾಡಿ, ನಾಟಕ, ಶಿಲ್ಪ, ಸಂಗಿತ ಯಾವುದೇ ಲಲಿತ ಕಲೆ ಇರಲಿ. ಅವುಗಳ ಮೂಲ ಸಾಹಿತ್ಯವೇ ಆಗಿದೆ. ಪ್ರಪಂಚದ ಎಲ್ಲ ಜ್ಞಾನ ಶಾಖೆಗಳನ್ನು ತಿಳಿಯಲು ಪುಸ್ತಕಗಳೇ ಆಕರವಾಗಿವೆ. ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಯಲು ಗ್ರಂಥಾಲಯಗಳು ಬೇಕು ಎಂದರು.

ಲೇಖಕಿ ಅನಿತ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಕ್ ಗಾರ್ಡನ್ ಮುಖ್ಯಸ್ಥ ಪ್ರಕಾಶ ದಾಸನೂರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಅಧ್ಯಕ್ಷ ನಾಗಪ್ಪ ಬೆಂತೂರ, ಸಾಹಿತಿ ಸತೀಶ ಕುಲಕರ್ಣಿ, ಜಾಗೃತಿ ಸಮಿತಿ ಸದಸ್ಯರಾದ ಲಕ್ಷಿಕಾಂತ್ ಮಿರಜಕರ ಸಿದ್ದೇಶ್ವರ ಹುಣಸೀಕಟ್ಟೀಮಠ, ಎಸ್.ಆರ್.ಹಿರೇಮಠ, ಸಿ.ವಿ.ಮತ್ತಿಗಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-22-2116988313

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.