ಶಿಗ್ಗಾವಿ: ಅಧಿಕಾರದ ಅವಧಿಯಲ್ಲಿಯ ಸೇವಾ ಮನೋಭಾವ, ಸಾರ್ವಜನಿಕರ, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಲು ಸಾಧ್ಯವಿದೆ. ನಿವೃತ್ತ ಶಿಕ್ಷಕ ಬಾರಕೇರ ಅವರು ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇಡೀ ಗ್ರಾಮಸ್ಥರೇ ಗೌರವಿಸುವಂತಾಗಿದೆ ಎಂದು ಬಿಇಒ ಎಂ.ಬಿ. ಅಂಬಿಗೇರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಿಮ್ಮಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಈಚೆಗೆ ನಿವೃತ್ತ ಶಿಕ್ಷಕ ಆರ್.ಆರ್. ಬಾರಕೇರ ಅವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗುರುವಿಲ್ಲದೇ ಸಕಲ ಜೀವಿಗಳಿಗೆ ಮಾರ್ಗದರ್ಶಮ ಸಿಗಲು ಸಾಧ್ಯವಿಲ್ಲ. ಹೀಗಾಗಿ ಗುರು ತೋರಿದ ದಾರಿಯಲ್ಲಿ ನಡೆದಾಗ ಮಾತ್ರ ಯಶಸ್ವಿ ಜಯ ಸಿಗಲು ಸಾಧ್ಯವಿದೆ. ಶಿಕ್ಷಕರ ವೃತ್ತಿ ಪವಿತ್ರವಾದದ್ದು’ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಆರ್.ಆರ್.ಬಾರಕೇರ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಸಂತಸ ಕಾಣಲು ಸಾಧ್ಯವಿದೆ. ಕೆಲಸ, ನೌಕರಿ ಎಂಬುವುದನ್ನು ಬಿಟ್ಟು ಸೇವಾ ಗುಣಗಳಿಂದ ಸೇವೆ ಸಲ್ಲಿಸಿದ್ದೇನೆ’ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರು ಹೆಬ್ಬಾಳ, ಜೂನಿಯರ್ ರಾಜಕುಮಾರ, ಅಶೋಕ ಬಸ್ತಿ, ಧಾರವಾಡ ನಗರ ಪಾಲಿಕೆ ಮಾಜಿ ಮೇಯರ್ ದಾನಪ್ಪ ಕಬ್ಬೇರ ಮಾತನಾಡಿದರು. ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ, ಬಿ.ಶ್ರೀನಿವಾಸ, ಬಿ.ವೈ.ಉಪ್ಪಾರ, ಗಣಪತಿ ಗುಣೋಜಿ, ವಿ.ಎಸ್.ಪಾಟೀಲ, ಚಂದ್ರಕಾಂತ ಗಾರವಾಡ, ಎಂ.ಯು.ಕರ್ಜಗಿ, ಮಹಾದೇವ ಸುಣಗಾರ, ಶಿವಾನಂದ ಭಜಂತ್ರಿ, ಆನಂದ ಕ್ಯಾರಕಟ್ಟಿ, ಗಂಗಪ್ಪ ತಾಂದೋಳ್ಕರ, ಶಿವಾಜಿ ತಮ್ಮಣ್ಣವರ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-22-2146857690

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.