ಶಿಗ್ಗಾವಿ: ಬೇಸಿಗೆ ರಜೆ ಮುಗಿಸಿ ಜೂನ್ 1ರಂದು ತಾಲ್ಲೂಕಿನ ಎಲ್ಲಾ ಶಾಲೆಗಳು ಆರಂಭವಾಗುತ್ತಿದ್ದು, ಅದರಿಂದಾಗಿ ಶಾಲೆ ಶಿಕ್ಷಕರು, ಸಿಬ್ಬಂದಿ ಇಡೀ ಶಾಲೆಯನ್ನು ಸ್ವಚ್ಚತೆ ಮಾಡುವ ಮೂಲಕ ಮಕ್ಕಳ ಸ್ವಾಗತಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತು.

ಕಸಕಡ್ಡಿ ಮತ್ತು ಜಾಡುಗಳನ್ನು ಸ್ವಚ್ಚತೆ ಮಾಡಿ ಪ್ರತಿ ಕೂಠಡಿಗಳನ್ನು ತೋಳೆದು ಸ್ವಚ್ಚಗೊಳಿಸಿದರು. ಕೆಲವು ಶಾಲೆಗಳಿಗೆ ಸುಣ್ಣ, ಬಣ್ಣಗಳನ್ನು ಹಚ್ಚಿ ಅಲಂಕರಿಸಲಾಗಿದೆ.

ಮಾವು, ತೆಂಗು, ಬಾಳೆಯ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಶಾಲೆ ಮುಖ್ಯಧಾರ ಬಾಗಿಲಿಗೆ ಬಣ್ಣದ ರಂಗೋಲಿ ಹಾಕಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಶಿಕ್ಷಕರು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಇಒ ಎಂ.ಬಿ.ಅಂಬಿಗೇರ ಮಾತನಾಡಿ, ಶಾಲೆ ಪ್ರಾರಂಭೋತ್ಸವ ಮಕ್ಕಳಿಗೆ ಹಬ್ಬದ ವಾತಾವರಣ ಮೂಡಿಸಬೇಕು. ಅದರಿಂದ ಶಾಲೆಯಿಂದ ಎರಡು ತಿಂಗಳೂ ದೂರಿದ್ದ ಮಕ್ಕಳು ಶಾಲೆ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಅಂತಹ ವಾತಾವರಣ ಶಾಲೆ ಶಿಕ್ಷಕರು, ಸಿಬ್ಬಂದಿ ಸೃಷ್ಟಿಸಬೇಕು. ಶಾಲೆಗೆ ಹೋಗಲು ಪಾಲಕರು ಪ್ರೇರೆಪಿಸಬೇಕು. ಶಾಲೆಗೆ ಬಂದಿರುವ ಮಕ್ಕಳಿಗೆ ಆತ್ಮೀಯವಾಗಿ ಹೂಹಣ್ಣು ನೀಡಿ ಸ್ವಾಗತಿಸಬೇಕು. ಸಿಹಿ ನೀಡುವ ಮೂಲಕ ಬಿಸಿ ಊಟ ನೀಡಬೇಕು. ಶಾಲೆಯಲ್ಲಿ ಪ್ರಾರಂಭೋತ್ಸವವನ್ನು ಹಬ್ಬದಂತೆ ಆಚರಿಸಬೇಕು. ಪಾಲಕರ ಸಭೆ ಕರೆದು ಮಕ್ಕಳ, ಪಠ್ಯಪುಸ್ತಕಗಳ ಕುರಿತು ಮಾಹಿತಿ ನೀಡುವಂತೆ ಸಲಹೆ ನೀಡಿರುವುದಾಗಿ ಅವರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-22-1548728444

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.