ಶಿಗ್ಗಾವಿ: ಬದುಕಿನ ಯಶಸ್ವಿಗೆ ಮೌಲ್ಯಾಧಾರಿತ ಶಿಕ್ಷಣ ಅವಶ್ಯವಾಗಿದೆ. ಹೀಗಾಗಿ ಶಿಕ್ಷಣದ ಜತೆ ನಾಡಿನ ಸಂಸ್ಕಾರ ಕಳಿಸುವುದು ಸಹ ಬಹು ಮುಖ್ಯವಾಗಿದೆ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಗೌರಮ್ಮ ಬಸವಣ್ಣೆಪ್ಪ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು, ಪಡೆದುಕೊಂಡ ಪದವಿ ಯಾವುದಾದರೂ ಎಲ್ಲ ಕೆಲಸಗಳನ್ನು ಮಾಡುವ ಬದ್ಧತೆಯನ್ನು ಹೊಂದಿರುವುದರ ಜೊತೆಗೆ ನಾಡಿನ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎ.ಸಿ.ವಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಬೇರೆ ಬೇರೆ ಘಟಕಗಳು ಕಾರ್ಯನಿರತವಾಗಿದ್ದು, ವಿದ್ಯಾರ್ಥಿಗಳು ಎಲ್ಲಾ ಘಟಕಗಳ ಅಡಿಯಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಜೊತೆಗೆ ವಿದ್ಯೆಗಿಂತ ಜ್ಞಾನ ದೊಡ್ಡದು. ಹಾಗಾಗಿ ಜ್ಞಾನ ವೃದ್ಧಿಸಿಕೊಳ್ಳಿ. ನಿಮ್ಮ ಬಾಳಿನ ಬೆಳಕಾಗುತ್ತದೆ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಮುಂದೆ ಜನ ಹಾಗೂ ಕುಟುಂಬ ನಿಮ್ಮನ್ನು ಸ್ಮರಿಸುತ್ತದೆ ಎಂದು ಹೇಳಿದರು.

ವರ್ಷ ಇತಿಹಾಸವಿರುವ ಕಾಲೇಜಿಗೆ ಜ್ಞಾನವೇ ಬಾಳಿನ ಬೆಳಕು ಎಂಬ ಧೇಯವಾಕ್ಯ ಹೊಂದಿರುವ ನೂತನ ಲೋಗೊ ಬಿಡುಗಡೆ ಮಾಡಲಾಯಿತು. ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿನ ಪ್ರತಿಭೆಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಐಕ್ಯೂ ಎ.ಸಿ. ಸಂಚಾಲಕಿ ಅಂಬಿಳಿ ಪಿಳ್ಳೆ ವರದಿ ವಾಚನ ಮಾಡಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ. ಡಿ.ಎಸ್. ಸೊಗಲದ, ಆನಂದ ಇಂದೂರ, ಪ್ರೊ. ಡಿ.ಎಸ್ ಭಟ್ಟ ಸ್ವಾಗತಿಸಿದರು. ಪ್ರೊ. ಪ್ರತಿಮಾ ಗುಂಜಳ, ಪ್ರೊ ವಿನಯ ಕುಲಕರ್ಣಿ, ಪ್ರೊ. ಆರ್. ಪಿ. ನದಾಫ್, ಪ್ರೊ. ಶೈಲಜಾ ಹುದ್ದಾರ, ಪ್ರೊ. ಮೇಘ ಚಲವಾದಿ, ಪ್ರೊ .ಶುಭ ಹಿರೇಮಠ, ಪ್ರಬಲ ರೊಡ್ಡಣ್ಣನವರ, ಲತಾ ಕೋಪರ್ಡೆ, ನೇತ್ರಾ ಉಮುಚಗಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-22-243889268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.