ಶಿಗ್ಗಾವಿ: ‘ಗುರು ಕಾಣ್ಯದಿಂದ ಮಾತ್ರ ಮನುಕುಲ ವಿಕಾಸ ಆಗಿದೆ. ಹೀಗಾಗಿ ಪರಂಪರಾಗತವಾಗಿ ಗುರುಕುಲಗಳು ಮನುಷ್ಯನಿಗೆ ಅಕ್ಷರ ಮತ್ತು ಅನ್ನ ದಾಸೋಹ ಮಾಡುವ ಕಾರ್ಯದಲ್ಲಿ ನಿರತವಾಗಿವೆ. ಅದರಿಂದಾಗಿ ವ್ಯವಹಾರಿಕ ಜ್ಞಾನ ಪಡೆಯಲು ಸಾಧ್ಯವಾಗಿದೆ’ ಎಂದು ಹುಲಗೂರ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ನಾಗರಾಜ ಬೋರಣ್ಣವರ ಹೇಳಿದರು.

ತಾಲ್ಲೂಕಿನ ಹುಲಗೂರ ಖಾದರಲಿಂಗ ಪ್ರೌಢ ಶಾಲೆಯಲ್ಲಿ 2001ರಿಂದ 2003-24ನೇ ಸಾಲಿನ ಹಳೆ ವಿದ್ಯಾರ್ಥಿಗಳ ಬಳಗದಿಂದ ಇತ್ತೀಚೆಗೆ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಂಜಿಗಟ್ಟಿ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಗೂರ ಓಲೇಮಠದ ಆನಂದದೇವರು, ಜೀವನ ಮುಕ್ತಾಲಯದ ಮೌನೇಶ್ವರ ಸ್ವಾಮೀಜಿ, ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ಶಿಕ್ಷಕರಾದ ಜೆ.ಎನ್.ಕಟಗಿ, ಎಂ.ಕೆ.ಡಂಬಳ, ಕೆ.ಎಂ.ಕಲಾದಗಿ, ವಿ.ವಿ.ಹುಡೇದ, ಎಸ್.ಎನ್.ಹಾದಿಮನಿ, ಸಿ.ಎಫ್.ಗಂಡೂಡಿ, ಜಿ.ಎಫ್.ಪುರವಂತಿ, ಎಫ್.ಪಿ.ಕುಂಬಾರ, ಬಿ.ಎಸ್ಅರ್ಕಸಾಲಿ, ಜಿ.ಎಚ್.ಚಲವಾದಿ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-22-1816007467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.