ಶಿಗ್ಗಾವಿ: ನಾಡಿನ ಶ್ರೇಯೋಭಿವೃದ್ಧಿಗೆ ಕನ್ನಡಪರ ಸಂಘಟನೆಗಳ ಶ್ರಮ ಅಪಾರವಾಗಿದೆ. ಒಗ್ಗಟ್ಟು ಪ್ರದರ್ಶನ ಪ್ರಬಲ ಶಕ್ತಿಸಾಮರ್ಥ್ಯ ಹೆಚ್ಚಿಸಲು ಸಾಧ್ಯವಿದೆ ಎಂದು ಸಾಹಿತಿ ಶಿವಾನಂದ ಮ್ಯಾಗೇರಿ ಹೇಳಿದರು.

ತಾಲ್ಲೂಕಿನ ಗಂಜಿಗಟ್ಟಿ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡದ ನೆಲ, ಜಲ, ಭಾಷೆ, ಸಾಹಿತ್ಯ, ಜನಪದ, ಸಂಸ್ಕೃತಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹದಾಶೆಯೊಂದಿಗೆ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಸರ್ವರನ್ನು ಒಳಗೊಂಡು, ಸರ್ವರ ಒಳತಿಗಾಗಿ, ಸರ್ವರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಾ ವಸುದೇವ ಕುಟುಂಬ ಎಂಬ ಸಂದೇಶವನ್ನು ಸಾರುತ್ತೀರುವುದು ಸಂತೋಷದ ವಿಷಯ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತೀನ ಅಧ್ಯಕ್ಷ ನಾಗಪ್ಪ ಬೆಂತೂರ ಪ್ರಾಸ್ತಾವಿಕವಾಗಿ ಮಾತನಾಡಿ, ಒಡೆಯರ ಅವರ ಜೊತೆಗೆ ಸಂಸ್ಥಾನದಲ್ಲಿ ದಿವಾನರಾಗಿದ್ದ, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಸರ್.ಮಿರ್ಜಾ ಇಸ್ಮಾಯಿಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಗಂಜಿಗಟ್ಟಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಿರಿಯ ತರಬೇತಿ ಅಧಿಕಾರಿ ಶಶಿಕಾಂತ ರಾಠೋಡ ಮಾತನಾಡಿದರು.

ಗಂಜಿಗಟ್ಟಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆಡಳಿತಾಧಿಕಾರಿ ರವಿಕುಮಾರ ಡಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖಂಡರಾದ ಬಸವರಾಜ ಹೆಸರೂರ, ರಾಘವೇಂದ್ರ ಕೌಜಲಗಿ, ರಮೇಶ ಹರಿಜನ, ಅಶೋಕ ಕಾಳೆ, ಶಂಭು ಕೇರಿ, ಆನಂದಗೌಡ ಹಿರೇಗೌಡರ, ಶಶಾಂಕ ಕೌಜಲಗಿ, ಸುಶೀಲಾ ಗೋಣಿ, ಬಸವರಾಜು, ನಾಗರಾಜ ಭೋವಿ, ಸುಭಾಷ , ಗುರುಪ್ರಸಾದ, ಗಂಗಮ್ಮ, ಜ್ಯೋತಿ, ಹೊನ್ನಪ್ಪ ಕರೆಕನ್ನಮ್ಮನವರ , ವಿಶಾಲಾಕ್ಷಿ ಜಾಧವ , ರಾಜು ಕೆಂಬಾವಿ ಸೇರಿದಂತೆ ಸಮಿತಿ ಸದಸ್ಯರು ಇದ್ದರು. ಜಾನಪದ ಹಿರಿಯ ಕಲಾವಿದ ಬಸವರಾಜ ಶಿಗ್ಗಾವಿ ಭಕ್ತಿಗೀತೆಗಳನ್ನು ಮತ್ತು ನಾಡಗೀತೆ ಹಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-22-1380583660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.