ಶಿಗ್ಗಾವಿ: ನಾಡು, ನುಡಿ ಬೆಳವಣಿಗೆಗಾಗಿ ಅನೇಕ ಮಹನೀಯರು ಶ್ರಮಿಸುವ ಮೂಲಕ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅಂತಹ ಸಾಧಕರ ಸ್ಮರಣೆಗಾಗಿ ದತ್ತಿ ಉಪನ್ಯಾಸಗಳು ಸಹಕಾರಿಯಾಗಿವೆ. ಅದಕ್ಕಾಗಿ ಕಸಾಪ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ದಿಶಾ ಇಂಟರನ್ಯಾಷನಲ್ ಸ್ಕೂಲ್ ಆವರಣದಲ್ಲಿ ಗುರುವಾರ ಕಸಾಪ ಜಿಲ್ಲಾ ಮತ್ತು ತಾಲ್ಲೂಕು ಘಟಕದ ವತಿಯಿಂದ ನಡೆದ ದಿ.ವೀರಪ್ಪ ಬಸಪ್ಪ ಮತ್ತಿಗಟ್ಟಿ, ದಿ.ಮಾತೋಶ್ರೀ ಗಂಗಮ್ಮ ಕಂಬಾಳಿಮಠ ಮತ್ತು ದಿ.ಚನ್ನವೀರಪ್ಪ ಮಹಾಜನಶೆಟ್ಟರ ಇವರ ಸ್ಮರಣಾರ್ಥವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮನದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಮೂಡಿಸಲು ಮತ್ತು ಭಾಷಾಭಿಮಾನ, ದೇಶಾಭಿಮಾನವನ್ನು ಇಮ್ಮಡಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸಗಳು ಸಹಕಾರಿಯಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಶಿಗ್ಗಾವಿ ಘಟಕದ ಕಾರ್ಯಕ್ರಮಗಳು ಉತ್ತಮವಾಗಿವೆ ಎಂ ದರು.

ದತ್ತಿ ದಾನಿ ಸಿ.ವಿ.ಮತ್ತಿಗಟ್ಟಿ ಮಾತನಾಡಿ, ಕ್ಷೇತ್ರದ ನೆಲ ಭಾವೈಕ್ಯತೆಯ ನೆಲೆವೀಡು, ಸಾಮರಸ್ಯದ ತವರೂರಾಗಿದ್ದು, ಇಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಕನ್ನಡ ಸಾಹಿತ್ಯ ಭವನ ದ ಅವಶ್ಯವಿದೆ ಹಾಗಾಗಿ ತಾಲ್ಲೂಕು ಘಟಕ ಈಗಾಗಲೇ ಪುರಸಭೆಯಿಂದ ಜಾಗೆಯನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ನಾವೆಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ದಿಶಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ ಬೇವಿನಮರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಪಠ್ಯಪುಸ್ತಕದ ಜತೆಗೆ ದಿನ ಪತ್ರಿಕೆ, ಕಥೆ, ಕವನ, ಹಾಡು, ಕಾದಂಬರಿ ಓದುವ ಹವ್ಯಾಸವನ್ನು ಬೆಳೆಸಬೇಕು ಎಂದರು.

ಉಪನ್ಯಾಸಕ ಯಲ್ಲಪ್ಪ ಹಾರೋಗೊಪ್ಪ ಮಾತನಾಡಿ ದರು. ನೂತನದತ್ತಿ ದಾನಿ ಆನಂದಗೌಡ ಹಿರೇಗೌಡರ ಹಾಗೂ ದತ್ತಿ ದಾನಿಗಳನ್ನು, ಉಪನ್ಯಾಸಕರನ್ನು ಹಾಗೂ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ, ರುದ್ರಮ್ಮ ವೀ ಕಂಬಾಳಿಮಠ, ಸೋಮಶೇಖರ ಮಹಾಜನಶೆಟ್ಟರ, ಲಲಿತಾ ಹಿರೇಮಠ. ಸಂಜನಾ ರಾಯ್ಕರ, ಮಂಗಲಾ ಮತ್ತಿಗಟ್ಟಿ, ರತ್ನಮ್ಮ ಪಾಟೀಲ, ಈರಪ್ಪ ಬೋಸಲೆ, ಮಾಂತೇಶ ನಾಯ್ಕೋಡಿ, ಸಂಜೀವ ಪೂಜಾರ. ಕೆ.ಬಿ.ಚನ್ನಪ್ಪ, ಬಸವರಾಜ ಕೌದಿ, ವಿ.ಎಂ.ರೇವಣಕರ, ಬಸವರಾಜ ಬಮ್ಮಿಗಟ್ಟಿ, ಸುರೇಶ ಹರಿಜನ, ಸಿದ್ದಪ್ಪ ಮಸಳಿ, ದೀಪಕ, ಕೆ,ಎನ್.ಕಲಾಲ, ಎನ್.ಎಂ.ನದಾಪ್, ಹೆಚ್.ಪಿ.ಹಾವೇರಿ, ಅರವಿಂದ ಹಾರೋಗೇರಿ ಸೇರಿದಂತೆ ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-22-1715171294

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.