ಶಿಗ್ಗಾವಿ: ‘ಪ್ರತಿಭೆಗಳಿಗೆ ತಕ್ಕ ಪ್ರೋತ್ಸಾಹ ನೀಡುವ ಜತೆಗೆ ಅವರ ಭವಿಷ್ಯದ ಯಶಸ್ವಿಗೆ ಪ್ರೇರಣೆಯಾಗಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವ ಮೂಲಕ ನಾಡಿಗೆ ಉತ್ತಮ ಕೊಡುಗೆ ನೀಡುವಂತಾಗಬೇಕು’ ಎಂದು ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಸಿಂದಗಿ ಶಾಂತವೀರೇಶ್ವರ ಸ್ವಾಮಿ ಜಾತ್ರೆ ಹಾಗೂ ಬಸವ ಜಯಂತಿ ಅಂಗವಾಗಿ ಗ್ರಾಮ ಸುಧಾರಣಾ ಸಮಿತಿಯಿಂದ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಚನ ವಾಚನ ಸ್ಪರ್ಧೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ವಯೋಮಾನ ಅನುಸಾರ ಮೂರು ಪ್ರತ್ಯೇಕ ವಿಭಾಗಗಳಲ್ಲಿ ವಚನ ವಾಚನ ಸ್ಪರ್ಧೆ ನಡೆಸಲಾಗಿದ್ದು, ಅಂದಾಜು 250 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಬಸವಣ್ಣವರ ಕಾಯಕ ಮತ್ತು ಸಾಮಾಜಿಕ ಸಮಾನತೆ ಸಂದೇಶಗಳನ್ನು ಮರುಕಳಿಸಲು ಸ್ಪರ್ಧೆಗಳು ಸಹಕಾರಿ’ ಎಂದರು.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶಂಕ್ರಿಕೊಪ್ಪದ ಅಮೃತ ಜಾಡಬಡಿಗೇರ ಪ್ರಥಮ, ಬಮ್ಮನಹಳ್ಳಿಯ ಸಾತ್ವಿಕ ಪೂಜಾರ ದ್ವಿತೀಯ, ಕುಳೇನೂರದ ತನುಶ್ರೀ ಹೊನ್ನತ್ತಿ ತೃತೀಯ ಪಡೆದರು. ವಿಜೇತರಿಗೆ ಕ್ರಮವಾಗಿ ₹10 ಸಾವಿರ, ₹7.5 ಸಾವಿರ, ₹5 ಸಾವಿರ ನಗದು ಬಹುಮಾನ ನೀಡಲಾಯಿತು.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿವಪುರದ ಅಮೃತ ಓಣಿಕೇರಿ ಪ್ರಥಮ, ಹುಣಸಿಕಟ್ಟಿ ಹರ್ಷಿತ ಪ್ಯಾಟಿ ದ್ವಿತೀಯ, ಹುಲಿಕಟ್ಟಿ ಚೈತ್ರಾ ಹೆಗಡೆ ತೃತೀಯ ಪಡೆದರು.

ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಸಾವಿತ್ರಿ ಎಂ.ಕೋಟಿ ಪ್ರಥಮ, ಕೀರ್ತನ ಬಸವರಾಜ ಭಂಗಿ ದ್ವಿತೀಯ, ಮಂಗಳ ಕರಬಸಪ್ಪ ಬೈಲವಾಳ ಹಾಗೂ ಪೈಜಾ ಅಂಜುಮ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜ್ಞಾನನಿಧಿ ಸವೋದಯ ಕೋಚಿಂಗ್ ಸೆಂಟರ್ ಮುಖ್ಯಸ್ಥ ರಾಜಪ್ಪ ಪಾಪೋಜಿ, ಶಿಕ್ಷಕ ಬಸವರಾಜ ವಡ್ಡರ ನೇತೃತ್ವ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-285511824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.