ಶಿಗ್ಗಾವಿ: ಮಹಿಳೆಯರ ಸ್ವಾವಲಂಬನೆಗೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಅವರು ಆದ್ಯತೆ ನೀಡಿದರು. ಅದರಿಂದಾಗಿ ಮಹಿಳೆಯರು ಇಂದು ಪ್ರತಿ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಇದರಿಂದ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಸಾಧ್ಯವಾಯಿತು ಎಂದು ರೇಣುಕಾಚಾರ್ಯ ಆಸ್ಪತ್ರೆ ಮುಖ್ಯ ವೈದ್ಯ ಡಾ.ಆರ್.ಎಸ್. ಅರಳೆಲೆಮಠ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಆವರಣದಲ್ಲಿ ಈಚೆಗೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಡವರು, ಹಿಂದುಳಿದ ಜನರ ನೋವಿಗೆ ಸ್ಪಂದಿಸಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಹಸಿವು ನಿಗಿಸಲು ಸಾಧ್ಯವಾಯಿತು. ಅಂತಹ ಮಹಾತ್ಮರ ಸ್ಮರಣೆ ಅರ್ಥಪೂರ್ಣ’ ಎಂದರು.

ಜಾನಪದ ಕಲಾವಿದ ಗುರು ಛಲವಾದಿ ಮಾತನಾಡಿ, ಬುದ್ಧವಂದನಾ, ತ್ರೀಶರಣ, ಪಂಚಶೀಲಗಳನ್ನು ಭೋದಿಸಿದರು. ಅಂಬೇಡ್ಕರ್ ಅವರ ಜೀವನ ಚರಿತ್ರೆ ಬರೆದ ಶಿಕ್ಷಕಿ ಸುವರ್ಣ ಮಾಳಗಿಮನಿ ಅವರನ್ನು ಸನ್ಮಾನಿಸಲಾಯಿತು.

ಬೆಳಿಗ್ಗೆ ಡಾ.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರದ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.

ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಯೂಬಖಾನ ಪಠಾಣ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ, ಕಲಾವಿದ ಸಿದ್ಧಲಿಂಗಪ್ಪ ನರೇಗಲ್, ಅಬ್ದುಲ್ ರಜಾಕ ತಹಶೀಲ್ದಾರ, ಪುರಸಭೆ ಸದಸ್ಯರಾದ ಸುರೇಶ ಕುರಗೋಡಿ, ತಹಮೀದ್ ಖಾಜಿ, ರಾಜು ಟೊಪಣ್ಣವರ, ರಮೇಶ ಸಿದ್ದುನವರ, ಸೋಮು ಕುರಿ, ನೂರಹಮ್ಮದ ಜಕಾತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-22-2013814486

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.