ಲಕ್ಷ್ಮೇಶ್ವರ: ‘ತಾಲ್ಲೂಕಿನ ಶಿಗ್ಲಿ ಗ್ರಾಮವು ಸ್ವಾತಂತ್ರ್ಯ ಯೋಧರ ಊರಾಗಿದ್ದು, 1924ರಿಂದ 1947ರವರೆಗೆ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಇಲ್ಲಿನ 40ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು’ ಎಂದು ರಾಮಗಿರಿ ವರಕವಿ ಡಾ. ದ.ರಾ. ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ ಸಂಗಮೇಶ ತಮ್ಮನಗೌಡ್ರ ಹೇಳಿದರು.

ತಾಲ್ಲೂಕಿನ ಶಿಗ್ಲಿಯ ಸೇವಾ ಮಂದಿರದಲ್ಲಿ ಭಾನುವಾರ ನಡೆದ ಸಾಹಿತಿ ಆರ್.ಎಂ. ಹೊನಕೇರಿ ಅವರ ‘ಶಿಗ್ಲಿಯ ಸ್ವಾತಂತ್ರ್ಯ ಯೋಧರು’ ಪುಸ್ತಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹೂವಿನಶಿಗ್ಲಿಯಲ್ಲಿ ಬ್ರಿಟಿಷರ ವಿರುದ್ಧ ಭಾಷಣ, ಮೈಲಾರ ಮಹದೇವಪ್ಪ ಅವರ ನೇತೃತ್ವದಲ್ಲಿ ಸವಣೂರಿನ ರೈಲುನಿಲ್ದಾಣ ಸುಟ್ಟಿದ್ದು, ಬ್ರಿಟಿಷರ ಕೆಂಗೆಣ್ಣಿಗೆ ಗುರಿಯಾಗಿ ಹಿಂಡಲಗಾ, ಧಾರವಾಡ, ಹಾವೇರಿ, ಗುಲ್ಬರ್ಗಾ ಜೈಲು ಅನುಭವಿಸಿದ್ದನ್ನು ಈ ಕೃತಿಯಲ್ಲಿ ತಿಳಿಯಬಹುದು’ ಎಂದರು.

ಇಷ್ಟಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿ.ಆರ್. ಗೋಕಾವಿ, ಸೋಮಣ್ಣ ಡಾಣಗಲ್ಲ, ಕೃಷ್ಣಾ ಬಿದರಳ್ಳಿ, ಆರ್.ಎಂ. ಹೊನಕೇರಿ, ವಿಷ್ಣು ಮಾಳೊದೆ, ರಾಮಣ್ಣ ಬೆಟಗೇರಿ, ಅಶೋಕ ಮುಳಗಂದ, ಆದೇಶ ಹುಲಗೂರ, ಕಲ್ಲೇಶಪ್ಪ ಮನಗೂಳಿ, ಮಹಾಂತೇಶ ಕುತಣಿ, ಶಿವಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-23-603047278

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.