ಶಿಕಾರಿಪುರ: ಸರ್ಕಾರವು ಗ್ರಾಮ ಪಂಚಾಯಿತಿಯ ಅರಿವು ಕೇಂದ್ರದ ಮೂಲಕ ಆಯೋಜಿಸಿರುವ ಬೇಸಿಗೆ ಶಿಬಿರ ಗ್ರಾಮೀಣ ಪ್ರದೇಶದ ಮಕ್ಕಳ ಸಂಭ್ರಮಕ್ಕೆ ಕಾರಣವಾಗಿದೆ.

ತಾಲ್ಲೂಕಿನ 43 ಅರಿವು ಕೇಂದ್ರಗಳಲ್ಲಿ ಮೇ ತಿಂಗಳ ವಿವಿಧ ದಿನ ಶಿಬಿರ ನಡೆಯಲಿದ್ದು, 8 ರಿಂದ 13 ವಯಸ್ಸಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಇವರಿಗೆ ಆಯಾ ಗ್ರಾಮ ಪಂಚಾಯಿತಿ ಕಚೇರಿ, ಅವುಗಳ ವ್ಯಾಪ್ತಿಯ ಅಂಚೆ ಕಚೇರಿ, ಬ್ಯಾಂಕ್ಗಳಿಗೆ ಕರೆದೊಯ್ದು ಅಲ್ಲಿನ ಕಾರ್ಯವೈಖರಿ ಹೇಗಿರಲಿದೆ ಎಂಬುದನ್ನು ತಿಳಿಸಲಾಗುತ್ತಿದೆ. ಪ್ರತಿದಿನ ದಿನಪತ್ರಿಕೆ ಗಟ್ಟಿಯಾಗಿ ಓದುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಜನಪದ ಹಾಡು, ತಮ್ಮಿಷ್ಟದ ವಿಷಯದ ಕುರಿತು ಮಾತನಾಡಲು ಅವಕಾಶ ನೀಡಲಾಗುತ್ತಿದೆ. ಚಪ್ಪರ ಹಾಕುವುದು, ಪ್ಲಾಸ್ಟಿಕ್ ಬಳಸದೆ ಸ್ಥಳೀಯ ಹೂವು, ಎಲೆ ಬಳಸಿ ವೇದಿಕೆ ನಿರ್ಮಾಣ ಮಾಡುವುದು ಹೀಗೆ ಹಲವು ವಿಷಯಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುತ್ತಿದೆ.

ಗಾಮ, ಸುಣ್ಣದಕೊಪ್ಪ, ಈಸೂರು, ಹಿತ್ತಲ, ಬೇಗೂರು ಸೇರಿ ಹಲವು ಗ್ರಾಮಗಳ ಹಿರಿಯರನ್ನು ಕರೆಸಿ ಗ್ರಾಮದ ಇತಿಹಾಸ ತಿಳಿಸುವ ಕೆಲಸ ನಡೆಸಲಾಗುತ್ತಿದೆ. ಮಾರವಳ್ಳಿ, ಅಗ್ರಹಾರ ಮುಚಡಿ, ಗೊಗ್ಗ, ಜಕ್ಕಿನಕೊಪ್ಪ ಗ್ರಾಮದಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನ ಪ್ರಯೋಗ ಮಾಡುವ ಮೂಲಕ ಮಕ್ಕಳ ಗಮನ ಸೆಳೆಯುತ್ತಿದ್ದಾರೆ.

‘ಅರಿಶಿಣಗೆರೆ, ತೊಗರ್ಸಿ, ಮಳವಳ್ಳಿ, ಕೊರಟಿಗೆರೆ, ತಾಳಗುಂದ ಗ್ರಾಮದಲ್ಲಿ ಪೇಪರ್ ಕ್ರಾಪ್ಟ್ ತಯಾರಿಕೆ, ಭಾಷಣ, ಹಾಡು, ಸುಂದರ ಬರವಣಿಗೆ ಸ್ಪರ್ಧೆ ನಡೆಸಿದ್ದು, ವಿದ್ಯಾರ್ಥಿಗಳು ಸಂತೋಷದಿಂದ ಕಲಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಎನ್.ಜಿ.ನಾಗರಾಜ್ ಅಭಿಪ್ರಾಯಪಡುತ್ತಾರೆ.

ತಾಲ್ಲೂಕು ಮಟ್ಟದ ಸ್ಪರ್ಧೆ: ಶಿಬಿರದಲ್ಲಿ ವಿಜ್ಞಾನ ಮಾದರಿ ತಯಾರಿಕೆ ಬಗ್ಗೆ ಕಲಿಸಲಾಗುತ್ತಿದೆ. ಟೆಲಿಸ್ಕೋಪ್ ತಯಾರಿಕೆಯ ಮಾಹಿತಿ, ಆಹಾರ ಪೋಷಕಾಂಶ ಕುರಿತ ಮಾಹಿತಿ ನೀಡಲಾಗುತ್ತಿದೆ. ಶಿಬಿರದಲ್ಲಿ ಕಲಿತಿರುವ ವಿಷಯದ ಕುರಿತು ತಾಲ್ಲೂಕು ಮಟ್ಟದ ಸ್ಪರ್ಧೆಯನ್ನು ಮೇ 26ಕ್ಕೆ ಆಯೋಜಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶಿಬಿರಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಜತೆ ಜಿಲ್ಲಾ ಮಟ್ಟದಲ್ಲೂ ಸ್ಪರ್ಧೆ ಆಯೋಜಿಸಲಾಗಿದೆ. ಈ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ರೂಢಿಸಲಾಗುತ್ತಿದೆ ಎಂದು ಗಾಮ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕ ನಾಗರಾಜ್ ಕಾಟಣ್ಣ ಹೇಳುತ್ತಾರೆ.

ಪ್ರವಾಸದ ಮೋಜು: ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡವರಿಗೆ ಜಿಲ್ಲೆ, ತಾಲ್ಲೂಕು ವ್ಯಾಪ್ತಿಯ ಹಲವು ಪ್ರವಾಸಿ ಕೇಂದ್ರಕ್ಕೂ ಕರೆದುಕೊಂಡು ಹೋಗಿರುವುದು ಮಕ್ಕಳ ಸಂಭ್ರಮ ಇಮ್ಮಡಿಗೊಳಿಸಿದೆ. ಗಾಮ ಗ್ರಾಮ ಪಂಚಾಯಿತಿ ಆಡಳಿತ ಶಿಬಿರಾರ್ಥಿಗಳಿಗೆ ಸಕ್ರೆಬೈಲು, ಸಿಂಹಧಾಮಕ್ಕೆ ಕರೆದುಕೊಂಡು ಹೋಗಿದೆ. ತಾಲ್ಲೂಕಿನ ಬಳ್ಳಿಗಾವಿ, ಉಡುಗಣಿ, ಶಿವನಪಾದ, ಬಂದಳಿಕೆ ಸೇರಿದಂತೆ ಹಲವು ಪ್ರವಾಸಿ ಕೇಂದ್ರಕ್ಕೆ ಶಿಬಿರಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-42-1390818687

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.