ಶಿರಾ: ‘ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಹೈಟೆಕ್ ಸರ್ಕಾರಿ ಮಾದರಿ ಶಾಲೆ ಸ್ಥಾಪಿಸಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂಬ ಗುರಿ ಹೊಂದಿದ್ದು ಇದಕ್ಕೆ ಸಹಕಾರ ಅತ್ಯವಶ್ಯ’ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ವಿದ್ಯಾನಗರದಲ್ಲಿ ಸಿಎಂಜಿ ಅಭಿಮಾನಿ ಬಳಗದಿಂದ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

‘ಖಾಸಗಿಯಾಗಿ ಪ್ರೆಸಿಡೆನ್ಸಿ ಶಾಲೆ ನಡೆಸುತ್ತಿದ್ದರು ಸಹ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಮೂಲಕ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುತ್ತಿದೆ. ಈಗಾಗಲೇ 6 ಹೈಟೆಕ್ ಶಾಲೆ ನಿರ್ಮಾಣ ಮಾಡಲಾಗಿದೆ’ ಎಂದರು.

ವಿಜೇತರು: ರಂಗೋಲಿ ಸ್ಪರ್ಧೆಯಲ್ಲಿ ತಲಾ ₹5 ಸಾವಿರ ಪ್ರಥಮ ಬಹುಮಾನ ರಾಧಿಕ ಮತ್ತು ಸವಿತಾ, ತಲಾ ₹3 ಸಾವಿರ ದ್ವಿತೀಯ ಬಹುಮಾನ ಮೈಥಲಿ ಮತ್ತು ಸುಕನ್ಯ, ತಲಾ ₹ 2 ಸಾವಿರ ತೃತೀಯ ಬಹುಮಾನ ಗಾಯಿತ್ರಿ ಮತ್ತು ಅನಿತಾ ಪಡೆದರು. ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಹಿರಿಯ ಮಹಿಳಾ ನಾಗರೀಕರನ್ನು ಸನ್ಮಾನಿಸಲಾಯಿತು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಪ್ರೇಮ ಹೆಗಡೆ, ನಿವೃತ್ತ ಮುಖ್ಯ ಶಿಕ್ಷಕ ನಾಗೇಂದ್ರಪ್ಪ, ಹಿಮಂತರಾಜು, ನಗರಸಭೆ ಸದಸ್ಯೆ ಸುಶೀಲ ವಿರೂಪಾಕ್ಷ, ಕುಮಾರ್ ಮಾಸ್ಟರ್, ಈರಣ್ಣ ಪಟೇಲ್, ಭಾಸ್ಕರ್, ಜ್ಯೋತಿ, ನಾದೂರು ಕುಮಾರ್, ಪುರುಷೋತ್ತಮ್, ಮೂಗನಹಳ್ಳಿ ರಾಮು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-17-1745046125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.