ಶಿರಹಟ್ಟಿ: ‘ತಮ್ಮ ಜೀವನಪೂರ್ತಿ ದೇಶದ ಏಳ್ಗೆ, ಸಮಾಜದ ಉನ್ನತಿಗಾಗಿ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಉಜ್ವಲ ಭಾರತದ ಕನಸು ಕಂಡಿದ್ದರು. ಅಸ್ಪೃಶ್ಯತೆಯ ನಿವಾರಣೆ, ಅಸಮಾನತೆ ತೊಡೆದು ಹಾಕುವುದು, ಎಲ್ಲರಿಗೂ ಶಿಕ್ಷಣ ಹಾಗೂ ಉದ್ಯೋಗದ ಸಮಾನ ಅವಕಾಶಗಳು ಸಿಗಬೇಕು ಎಂಬ ಮಹಾದಾಸೆ ಹೊಂದಿದ್ದರು’ ಎಂದು ಶಾಸಕ ಡಾ.ಚಂದ್ರು ಲಮಾಣಿ ಅಭಿಪ್ರಾಯಪಟ್ಟರು.

ಸ್ಥಳೀಯ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಬೂ ಜಗಜೀವನರಾಂ ಅಪ್ರತಿಮ ಸಂಘಟನಕಾರರು. ಇವರ ಪರಿಶ್ರ ಮದ ಫಲವಾಗಿ ದೇಶ ಇಂದು ಕೃಷಿ ಕ್ಷೇತ್ರ ದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗಿದೆ. ಐದು ದಶಕಗಳ ಕಾಲ ಸಂಸದರಾಗಿದ್ದ ಜಗಜೀವನರಾಂ ಅವರು ರೈತರ ಬೆಳೆ ಉತ್ಪಾದನೆಯ ಹೆಚ್ಚಳಕ್ಕೆ ಕಾರಣರಾಗಿದ್ದರು. ಅಲ್ಲದೇ ಅಂಬೇಡ್ಕರ್ ಅವರು ಇಡೀ ದೇಶದ ವಿಶ್ವಕೋಶ ಎಂದರು.

ಐ.ಎಸ್ ಮಾದರ ಉಪನ್ಯಾಸ ನೀಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಸೂತ್ರಗಳನ್ನು ಹಾಕಿ ಜನರು ಜಾಗೃತರಾಗಿ ಮೇಲೆ ಬರಲು ಕಾರಣರಾದರು. ಹರಿಜನರು ಎಲ್ಲ ಜಾತಿ ಜನರ ಹಿಂಸೆಗೆ ಮೈಯೊಡ್ಡಿ ನಿಂತು ನರಕದಿಂದಲೇ ಬದುಕಿ ಸ್ವಾಂತಂತ್ರ್ಯ ಕಾಣದೇ ದರ್ಪ, ದೌರ್ಜನ್ಯ, ದಬ್ಬಾಳಿಕೆಗೆ ಮತ್ತು ಗುಲಾಮಗಿರಿಗೆ ತುತ್ತಾಗಿ ಬಳಲಿ ಸತ್ತವರೆಷ್ಟೋ. ಇಂತವರ ಬದುಕನ್ನು ಎಲ್ಲ ಜಾತಿ ಜನರ ಸರಿಸಮಾನಕ್ಕೆ ತಿರುಗಾ ಡುವಂತೆ ಮಾಡಿದ ಕೀರ್ತಿ ಅಂಬೇಡ್ಕರ್ ಅವರದ್ದಾಗಿದೆ’ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದ ಪೂರ್ವ ದಲ್ಲಿ ಸ್ಥಳೀಯ ಜ.ಫಕೀರೇಶ್ವರ ಮಠ ದಿಂದ ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರ ಬೃಹತ್ ಮೆರವಣಿಗೆ ನಡೆಯಿತು. ಪಟ್ಟಣದ ಪ್ರಮುಖ ವೃತ್ತಗಳನ್ನು ಸಂಚರಿಸಿ ತಹಶೀಲ್ದಾರ್ ಕಚೇರಿಗೆ ಅಂತ್ಯಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ರಾಘವೇಂದ್ರ ರಾವು, ತಾ.ಪಂ ಇಒ ರಾಮಣ್ಣ ದೊಡ್ಡಮನಿ, ಬಿಇಒ ಎಚ್.ನಾಣಕೀ ನಾಯ್ಕ, ಸಿಪಿಐ ಬಿ.ವಿ.ನ್ಯಾಮಗೌಡ, ಪ.ಪಂ.ಮುಖ್ಯಾಧಿಕಾರಿ ಸವಿತಾ ತಾಂಬ್ರೆ, ಗೋಪಾಲ ಲಮಾಣಿ, ಡಿ.ಕೆ.ಹೊನ್ನಪ್ಪನವರ, ರಾಘವೇಂದ್ರ ದೊಡ್ಡಮನಿ, ವೀರಯ್ಯ ಮಠಪತಿ, ನಾಗರಾಜ ಲಕ್ಕುಂಡಿ, ಮೋಹನ್ ಗುತ್ತೆಮ್ಮನವರ, ಅಕ್ಬರ್ ಯಾದಗಿರಿ, ಗಾಳೆಪ್ಪ ಹರಿಜನ, ರವಿ ಗುಡಿಮನಿ, ಮುತ್ತರಾಜ ಬಾವಿಮನಿ, ಬಸವರಾಜ ವಡವಿ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-23-1986857528

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.