ಶಿರಹಟ್ಟಿ: ‘ಸಮಾಜದ ಸಮಗ್ರ ಅಭಿವೃದ್ಧಿಗೆ ಯುವಕರು ಸಂಘಟಿತರಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಅವಶ್ಯಕವಿದ್ದು, ಬಂಜಾರ ಸಂಸ್ಕೃತಿ, ಪರಂಪರೆ ಮತ್ತು ಆಚಾರ– ವಿಚಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ’ ಎಂದು ಗೋರಸೇನಾ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

ತಾಲ್ಲೂಕಿನ ಮಜ್ಜೂರ ತಾಂಡಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ಬಂಜಾರ ಸಮಾಜದ ಸಂಘಟನೆ, ಬಂಜಾರ ಸಂಸ್ಕೃತಿಯ ಉಳಿವು ಮತ್ತು ಬಾಲಸಂಸ್ಕಾರ ಕೇಂದ್ರಗಳ ಪ್ರಾರಂಭದ ಕುರಿತು ವಿಶ್ಲೇಷಣಾತ್ಮಕವಾಗಿ ಚರ್ಚಿಸಲಾಯಿತು. ತಾಂಡಾಗಳು ಎದುರಿಸುತ್ತಿರುವ ಮೂಲ ಸಮಸ್ಯೆಯ ಬಗ್ಗೆ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು. ಅಲ್ಲದೇ ಅವುಗಳನ್ನು ಖಂಡಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಯುವಕರು ಮುಂದಾಗುವುದರೊಂದಿಗೆ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಹೇಳಿದರು.

‘ಗದಗದಲ್ಲಿ ಮೇ 31ರಂದು ನಡೆಯಲಿರುವ ಬೃಹತ್ ಹಿಂದೂ ಸಮ್ಮೇಳನದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು’ ಎಂದು ಅವರು ಕರೆ ನೀಡಿದರು.

ತುಕಾರಾಮ ಲಮಾಣಿ, ಗಣೇಶ ಲಮಾಣಿ, ಪ್ರಕಾಶ ಲಮಾಣಿ, ಈರಣ್ಣ ಲಮಾಣಿ, ಶರಣಪ್ಪ ಲಮಾಣಿ, ಕೀರಣ ರಾಠೋಡ್, ರವಿ ಲಮಾಣಿ, ತುಲಾರಾಮ ಲಮಾಣಿ, ವಿನೋದ ಲಮಾಣಿ, ಪ್ರಭು ಲಮಾಣಿ, ಸಂಜು ಲಮಾಣಿ, ಅಶೋಕ್ ಲಮಾಣಿ, ಸುರೇಶ್ ಲಮಾಣಿ, ಅಪ್ಪು ಲಮಾಣಿ, ಕೇಶಪ್ಪ ಲಮಾಣಿ, ವಿಕಾಸ್ ಲಮಾಣಿ, ಚೆನ್ನಪ್ಪ ಲಮಾಣಿ, ಜಗದೀಶ ಲಮಾಣಿ, ಸಂಜು ಕೆ. ಲಮಾಣಿ, ಮುತ್ತು ಶಂಕ್ರಪ್ಪ ಲಮಾಣಿ, ಶೇಖರ್, ಚಂದ್ರು, ಪ್ರಶಾಂತ ಥಾವರಪ್ಪ, ರಮೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-23-1696009635

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.