ಶಿರಸಿ: ನಗರದ ವಿನೂತನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನೆಮ್ಮದಿ ಕುಟೀರದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ ಮಾತನಾಡಿ, ‘ನೆಮ್ಮದಿ ಕುಟೀರ ಮತ್ತು ರಂಗಧಾಮದಂತಹ ಕೇಂದ್ರಗಳು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಪ್ರತಿದಿನವೂ ವಿವಿಧ ಸೃಜನಶೀಲ ಚಟುವಟಿಕೆಗಳಿಂದ ಕೂಡಿರಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಅನಂತ ಹೆಗಡೆ ಬಾಳೇಗದ್ದೆ ಮಾತನಾಡಿ, ‘ವಿನೂತನ ಟ್ರಸ್ಟ್ ಇತ್ತೀಚಿನ ವರ್ಷಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದ್ದು, ಇದು ಅವರು ಆಯೋಜಿಸಿರುವ ಮೊದಲ ಬೇಸಿಗೆ ಶಿಬಿರವಾಗಿದೆ. ಮಕ್ಕಳು ಮತ್ತು ಪಾಲಕರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬೇಕು. ವರ್ಷವಿಡೀ ಶಾಲೆಗಳಲ್ಲಿ ಕಲಿಯುವ ಪಠ್ಯಕ್ಕಿಂತ ಭಿನ್ನವಾದ ಚಟುವಟಿಕೆಗಳು ಇಲ್ಲಿರಲಿ. ಆ ಮೂಲಕ ಮಕ್ಕಳಿಗೆ ಹೊಸ ರುಚಿ, ಅಭಿರುಚಿ ಹಾಗೂ ಆಸಕ್ತಿಗಳ ಪರಿಚಯವಾಗಲಿ’ ಎಂದು ತಿಳಿಸಿದರು.

ಪ್ರಗತಿಮಿತ್ರ ರೈತ ಉತ್ಪಾದಕ ಸಂಸ್ಥೆಯ ಮುಖ್ಯಸ್ಥ ವಿವೇಕ ಹೆಗಡೆ, ಟ್ರಸ್ಟ್ನ ಮುಖ್ಯಸ್ಥೆ ಸೀಮಾ ಹೆಗಡೆ ಇದ್ದರು. ಶಿಕ್ಷಕಿ ಸುಮಾ ಭಟ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-20-1750861446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.