ಶಿರಸಿ: ‘ಪ್ರಸ್ತುತ ಸಮಾಜವನ್ನು ಶ್ರೇಷ್ಠತೆಯ ವ್ಯಸನ ಕಾಡುತ್ತಿದೆ. ಇಲ್ಲಿ ಎಲ್ಲಾ ವರ್ಗದವರೂ ಮುಖ್ಯವಾಗಿದ್ದು, ಎಲ್ಲರನ್ನೂ ಗೌರವಿಸಿದಾಗ ಮಾತ್ರ ಸಾಮಾಜಿಕ ಸಮತೋಲನ ಸಾಧ್ಯ’ ಎಂದು ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ ವೈಶಾಲಿ ಹೇಳಿದರು.

ಇಲ್ಲಿನ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ ಮಾತನಾಡಿ, ‘ಜಿಲ್ಲೆಯಲ್ಲಿ ಅಕ್ಷರ ಜ್ಞಾನ ನೀಡಲು ಆರಂಭವಾದ ಎರಡನೇ ಮಹಾವಿದ್ಯಾಲಯ ಇದಾಗಿದ್ದು, ಜಿಲ್ಲೆಯಲ್ಲಿ ಶ್ರೇಷ್ಠ ಸ್ಥಾನ ಗಳಿಸಿದೆ’ ಎಂದರು.

ಇದೇ ಸಂದರ್ಭದಲ್ಲಿ ಎಂ.ಇ.ಎಸ್. ಸಂಸ್ಥಾಪಕ ಸದಸ್ಯರಾದ ತಿಮ್ಮಪ್ಪ ಹೆಗಡೆ ಬಿಸಲಕೊಪ್ಪ ಅವರ ಸಂಸ್ಮರಣೆಯ ಅಂಗವಾಗಿ, ಅವರ ಪುತ್ರ ಪ್ರಕಾಶ ಹೆಗಡೆ ಬಿಸಲಕೊಪ್ಪ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಗಣೇಶ ಹೆಗಡೆ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಪ್ರಾಚಾರ್ಯ ಪ್ರೊ. ಜಿ. ಟಿ.ಭಟ್ ಸ್ವಾಗತಿಸಿದರು. ಪ್ರೊ. ರಾಘವೇಂದ್ರ ಜಾಜಿಗುಡ್ಡೆ ವಂದಿಸಿದರು. ಪ್ರಾಧ್ಯಾಪಕಿಯರಾದ ದಿವ್ಯಾ ಹೆಗಡೆ, ವರ್ಷಾ ರಾಚೋಟಿ ಹಾಗೂ ಪ್ರಿಯಾ ಜೋಶಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-20-1752649685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.