ಶಿರಸಿ: ವಿಶ್ವ ಪರಂಪರಾ ದಿನದ ಅಂಗವಾಗಿ ತಾಲ್ಲೂಕಿನ ಐತಿಹಾಸಿಕ ಪರಂಪರೆಯ ಪ್ರಸಿದ್ಧ ನೆಲೆಯಾದ ಸೋಂದಾದಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕ್ಷೇತ್ರಾಧ್ಯಯನ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು. ರಂಗಚರಿತ ಸೋಂದಾ ಮತ್ತು ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಧ್ಯಯನ ಪ್ರವಾಸದ ನೇತೃತ್ವ ವಹಿಸಿದ್ದ ಹಿರಿಯ ಇತಿಹಾಸ ಸಂಶೋಧಕ ಲಕ್ಷ್ಮೀಶ ಸೋಂದಾ ಮಾತನಾಡಿ, ‘ಸೋಂದಾ ಕೇವಲ ಒಂದು ಗ್ರಾಮವಲ್ಲ, ಅದು ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಭವ್ಯ ಇತಿಹಾಸವನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಮಹಾನ್ ಸಂಸ್ಥಾನ. ಈ ಭವ್ಯ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಜ್ಞಾನಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ಕ್ಷೇತ್ರಾಧ್ಯಯನದ ತಂಡವು ಸೋಂದಾದ ಪ್ರಮುಖ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿತು. ಅಧ್ಯಾತ್ಮ ಮತ್ತು ಶಕ್ತಿಯ ಕೇಂದ್ರಗಳಾದ ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ವಾದಿರಾಜ ಮಠಗಳಿಂದ ಆರಂಭವಾದ ಈ ಪಯಣವು, ಅಲ್ಲಿನ ಶಿಲ್ಪಕಲೆ ಮತ್ತು ಸಂಪ್ರದಾಯಗಳ ಪರಿಚಯದೊಂದಿಗೆ ಮುಂದುವರಿಯಿತು. ನಂತರ ತಂಡವು ವಿಶಿಷ್ಟ ಶೈಲಿಯ ಹುಣಸೆಹೊಂಡ ದೇವಾಲಯ, ಮನಮೋಹಕ ಕೆರೆಯ ದಂಡೆಯಲ್ಲಿರುವ ಮುತ್ತಿನಕೆರೆ ವೆಂಕಟರಮಣ ದೇವಾಲಯ ಹಾಗೂ ಹಳೆಯೂರು ಶಂಕರ ನಾರಾಯಣ ದೇವಾಲಯಗಳಿಗೆ ಭೇಟಿ ನೀಡಿತು.

ಜತೆಗೆ, ಮಹಂತಿನ ಮಠ, ಜೈನ ನಿಷಧಿಗಳು ಹಾಗೂ ಐತಿಹಾಸಿಕ ಕೋಟೆಯ ಪ್ರದೇಶಗಳಿಗೂ ಭೇಟಿ ನೀಡಿ, ಸೋಂದಾದಲ್ಲಿದ್ದ ಸರ್ವಧರ್ಮ ಸಮನ್ವಯದ ಇತಿಹಾಸವನ್ನು ಮೆಲುಕು ಹಾಕಲಾಯಿತು. ಕೋಟೆಯ ಅವಶೇಷಗಳು ಮತ್ತು ಅಂದಿನ ರಕ್ಷಣಾ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಕುತೂಹಲದಿಂದ ಮಾಹಿತಿ ಪಡೆದುಕೊಂಡರು.

ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಶಾಂತೇರಿ ಪೈ ಮತ್ತು ಉಮಾ ಗೌಡ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅನುಭವಗಳನ್ನು ಹಂಚಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-20-2052028011

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.