ಶಿರ್ವ: ಬಡತನವನ್ನು ಸವಾಲಾಗಿ ಸ್ವೀಕರಿಸಿ ನೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಶಾಲೆಯನ್ನು ಆರಂಭಿಸಿದವರು ಸದಾ ಪ್ರಾತಃ ಸ್ಮರಣೀಯರು ಎಂದು ಕರ್ಣಾಟಕ ಬ್ಯಾಂಕ್ನ ಮಂಗಳೂರು ಪ್ರಧಾನ ಕಚೇರಿಯ ಉಪ ಮಹಾಪ್ರಬಂಧಕ ಗೋಪಾಲಕೃಷ್ಣ ಸಾಮಗ ಬೆಳ್ಳೆ ಹೇಳಿದರು.

ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದ ಆಡಳಿತಕ್ಕೆ ಒಳಪಟ್ಟ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮಗುವಿನ ಜೀವನದ ನೀಲನಕ್ಷೆ ತಯಾರಾಗುವುದೇ ಪ್ರಾಥಮಿಕ ಶಾಲೆಗಳಲ್ಲಿ. ಸರ್ಕಾರದ ನೀತಿ ಧೋರಣೆಗಳಿಂದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದೇ ಸವಾಲಾಗಿದೆ. ಅದಕ್ಕಾಗಿ ಹೆಚ್ಚಿನವರ ತ್ಯಾಗ, ಸೇವೆಯ ಅಗತ್ಯವಿದೆ. ಕರ್ಣಾಟಕ ಬ್ಯಾಂಕ್ ಇತಿಮಿತಿಯೊಳಗೆ ತಮ್ಮೊಂದಿಗೆ ಕೈಜೋಡುತ್ತದೆ ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಶಾಲೆಯ ಸಂಸ್ಥಾಪಕರ ಸಾತ್ವಿಕ ತಪಸ್ಸಿನ ಫಲದಿಂದ ನೂರು ವರ್ಷಗಳಿಂದ ಈ ಶಾಲೆ ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ನೂರು ವರ್ಷಗಳಲ್ಲಿ ಈ ಶಾಲೆ ದೇಶಕ್ಕೆ ನೂರಾರು ಸತ್ಪ್ರಜೆಗಳನ್ನು ಕೊಟ್ಟಿದೆ. ಶಿಕ್ಷಣದ ಮೂಲಕ ಜೀವನದ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದೆ ಎಂದರು.

ರಾಜ್ಯ ಹೆದ್ದಾರಿಯಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಿ ಕೊಟ್ಟ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಶಾಲಾ ಶತಮಾನೋತ್ಸವ ಸಮಿತಿ, ದೇವಳದ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ, ಹಳೆವಿದ್ಯಾರ್ಥಿ ಡಾ.ಗೀತಾ ಶರ್ಮಾ ಮಾತನಾಡಿದರು. ಸಿಆರ್ಪಿಯಾಗಿ ಕಾರ್ಯನಿರ್ವಹಿಸಿದ ಸರಿತಾ ರಾಣಿ, ಶಾಲಾ ಸಂಚಾಲಕರಾಗಿದ್ದ ಜಯರಾಮ ಪ್ರಭು, ರಾಮದಾಸ ಪ್ರಭು, ಶ್ರೇಯಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಮುಂಡಾಳ ಸಮಾಜದ ಅಧ್ಯಕ್ಷ ಶಂಕರ ಪದಕಣ್ಣಾಯ ಶುಭ ಹಾರೈಸಿದರು. ಮುಖ್ಯಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ವರದಿ ವಾಚಿಸಿದರು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶಶಿಧರ ವಾಗ್ಲೆ, ಎಸ್ಡಿಎಂಸಿ ಅಧ್ಯಕ್ಷ ರವೀಂದ್ರ ಪಾಟ್ಕರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನವೀನ್ ಸನಿಲ್, ವಿದ್ಯಾರ್ಥಿ ನಾಯಕ ರಿತಿಕ್ ಭಾಗವಹಿಸಿದ್ದರು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ದೇವದಾಸ್ ಪಾಟ್ಕರ್, ಅರುಂಧತಿ ಪ್ರಭು ನಿರೂಪಿಸಿದರು. ಶಿಕ್ಷಕಿ ಶ್ವೇತಾ ನಾಯಕ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-28-189273075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.