ಶಿಕಾರಿಪುರ: ‘ಬಿ.ಆರ್.ಅಂಬೇಡ್ಕರ್ ಯಾವುದೇ ಜಾತಿಗೆ ಸೀಮಿತವಲ್ಲ. ಜಾತಿ ಕಾರಣಕ್ಕೆ ತಮಗೆ ಸಿಗದ ಎಲ್ಲ ಸೌಲಭ್ಯಗಳನ್ನು ತಮ್ಮ ಸಮುದಾಯಕ್ಕೆ ಕೊಡಿಸಿದ ಧೀಮಂತ ನಾಯಕ. ಅವರ ಸಿದ್ಧಾಂತ ಎಲ್ಲರಿಗೂ ಅನುಕರಣೀಯ’ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲ್ಲೂಕು ಆಡಳಿತ, ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ನಡೆದ ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ತಳಸಮುದಾಯದಲ್ಲಿ ಜನಿಸಿದ ಅಂಬೇಡ್ಕರ್, ಹೆಜ್ಜೆ ಹೆಜ್ಜೆಗೂ ತಮಗೆ ಎದುರಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ತಳ ಸಮುದಾಯದ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದರು. ಹಿಂದೂ ಧರ್ಮದಲ್ಲಿನ ಮೌಢ್ಯ ತೊಲಗಿಸಲು ಮುಂದಾದರು. ಮಹಿಳಾ ಹಕ್ಕುಗಳ ಪರವಾಗಿ ಕಾಯ್ದೆ ತಂದರು. ಕಾರ್ಮಿಕರಿಗೆ ಕೆಲಸದ ಅವಧಿ ನಿಗದಿ, ರಿಸರ್ವ್ ಬ್ಯಾಂಕ್ ಸ್ಥಾಪನೆ ಸೇರಿದಂತೆ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದ ಕೀರ್ತಿ ಅಂಬೇಡ್ಕರ್ಗೆ ಸಲ್ಲುತ್ತದೆ’ ಎಂದರು.

‘ಪುರಸಭೆ ವತಿಯಿಂದ ನಿರ್ಮಿಸಿರುವ ಅಂಬೇಡ್ಕರ್ ವೃತ್ತದ ಅಭಿವೃದ್ಧಿ ಕೆಲಸಗಳು ಅಚ್ಚುಕಟ್ಟಾಗಿವೆ. ಅದನ್ನು ಜನಾಕರ್ಷಣೆಯ ಸ್ಥಳವನ್ನಾಗಿಸಿರುವುದು ಮೆಚ್ಚುವಂತಹದ್ದು. ಎಲ್ಲ ದಲಿತಪರ ಸಂಘಟನೆಗಳು ಒಗ್ಗಟ್ಟಾಗಿದ್ದರೆ ಸವಾಲು ಎದುರಿಸಲು ಸಾಧ್ಯ. ಸಮುದಾಯದ ಸದಸ್ಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದಕ್ಕೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ಕೃಷಿಕ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಗರದ ಮಹಾದೇವಪ್ಪ, ಉಪನ್ಯಾಸಕರಾದ ಗುಡದಯ್ಯ, ವಸಂತನಾಯ್ಕ ಉಪನ್ಯಾಸ ನೀಡಿದರು. ತಹಶೀಲ್ದಾರ್ ಯು.ವಾಣಿ, ತಾ.ಪಂ. ಇಒ ಎನ್.ಟಿ.ನಾಗರಾಜ್, ಡಿವೈಎಸ್ಪಿ ಕೇಶವ, ಮಾದಿಗ ಮಹಾಸಭೆ ಅಧ್ಯಕ್ಷ ಬಸವರಾಜ್ ಮಟ್ಟಿಕೋಟೆ, ಬಿ.ಪಾಪಯ್ಯ, ಚುರ್ಚಿಗುಂಡಿ ಜಗದೀಶ, ತಿಪ್ಪೇಶ, ವಕೀಲ ನಿಂಗಪ್ಪ, ನರಸಿಂಹಸ್ವಾಮಿ, ಬಸವರಾಜ್ ಮಾರವಳ್ಳಿ, ಬಸವರಾಜ್ ರೋತೆ, ಗೋಣಿ ಮಾಲತೇಶ್, ಹುಲ್ಮಾರ್ ಮಹೇಶ್ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-42-2029519689

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.