ಶಿವಮೊಗ್ಗ: ‘ಆಧುನಿಕ ಸೌಲಭ್ಯಗಳು ಹೆಚ್ಚಾದಂತೆ ಮನುಷ್ಯನ ಜೀವನಶೈಲಿ ದುರ್ಬಲಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಪಿ.ನಾರಾಯಣ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಿಂದ ಗುರುವಾರ ಮತ್ತೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯನಲ್ಲಿ ಕಾಡುತ್ತಿರುವ ಅತಿ ದೊಡ್ಡ ರೋಗವೆಂದರೆ ಸೋಮಾರಿತನ. ಅದನ್ನು ತಪ್ಪಿಸಲು ಜ್ಞಾನದ ವಿಕಸನದ ಜೊತೆಗೆ ದೇಹ ದಂಡನೆಗೂ ಆದ್ಯತೆ ನೀಡಿ. ಪ್ರತಿದಿನ ಕನಿಷ್ಟ ಇಪ್ಪತ್ತು ನಿಮಿಷದ ನಡಿಗೆಯು ಹೃದಯದ ಆಯಸ್ಸನ್ನು ಜಾಸ್ತಿ ಮಾಡುತ್ತದೆ. ಬೆಳಗಿನ ಸೂರ್ಯನ ಕಿರಣಗಳು ನೀಡುವ ಪ್ರಕಾಶತೆಗೆ ದೇಹ ಒಗ್ಗಿಕೊಂಡಾಗ, ಚರ್ಮದ ಮೂಲಕ ವಿಟಮಿನ್ ಡಿ ಸಿಗುತ್ತದೆ. ಒತ್ತಡಗಳನ್ನು ನಿರ್ವಹಿಸುವ ವಿಧಾನ ಅಳವಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಮನುಷ್ಯ ಸಮಾಜಕ್ಕೆ ಅಭಿಮುಖವಾಗಿ ಚಲಿಸುತ್ತಿದ್ದಾನೆ. ಸಮಾಜದ ಒಡನಾಟದಿಂದ ದೂರಾಗಿ ಅವಲೋಕನದ ಶಕ್ತಿ ಕಳೆದುಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಎನ್ಎಸ್ಎಸ್ ಶಿಬಿರಗಳು ಸಾಮಾಜಿಕ ಶಕ್ತಿಯಾಗಿ ಕಾರ್ಯನಿರ್ವಹಿಸಲು ಪೂರಕ ವೇದಿಕೆಯಾಗಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎನ್.ಕೆ.ಚಿದಾನಂದ ಹೇಳಿದರು.

ಶಾರದಾ ವಿಲಾಸ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಸುಧೀಂದ್ರ ಮಾತನಾಡಿದರು.

ಶಿಬಿರದ ಸಂಯೋಜನಾಧಿಕಾರಿ ಡಿ.ಎಸ್. ಮಂಜುನಾಥ ಉಪಸ್ಥಿತರಿದ್ದರು.

ಅಗ್ನಿವೀರ್ ನೇಮಕಾತಿಗೆ ತರಬೇತಿ ಶಿಬಿರ

ಸಾಗರ: ಭಾರತೀಯ ಸೇನೆಯ ಅಗ್ನಿವೀರ್ ವಿಭಾಗಕ್ಕೆ ಸೇರ ಬಯಸುವವರಿಗೆ ಮೇ 13ರಿಂದ 28ರವರೆಗೆ ಉಚಿತ ತರಬೇತಿ ಮತ್ತು ಮಾಹಿತಿ ಶಿಬಿರವನ್ನು ಸಿಗಂದೂರು ದೇವಸ್ಥಾನದ ಸಮೀಪ ಆಯೋಜಿಸಲಾಗಿದೆ.

‘ಮಲೆನಾಡು ಸೋಲ್ಜರ್ ಸಂಸ್ಥೆ, ಸಿಗಂದೂರೇಶ್ವರಿ ಟ್ರಸ್ಟ್ ವತಿಯಿಂದ ಈ ಶಿಬಿರ ನಡೆಯಲಿದೆ. ಶಿಬಿರಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದು ಶಿಬಿರದ ಸಂಚಾಲಕ, ಮಲೆನಾಡು ಸೋಲ್ಜರ್ ಸಂಸ್ಥೆ ಅಧ್ಯಕ್ಷ ಕಿಶೋರ್ ಭೈರಾಪುರ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೈನ್ಯಕ್ಕೆ ಸೇರುವ ಮುನ್ನ ಯಾವ ರೀತಿಯ ದೈಹಿಕ, ಲಿಖಿತ ಪರೀಕ್ಷೆ ಎದುರಿಸಬೇಕಾಗುತ್ತದೆ ಎಂಬುದರ ಕುರಿತು ಶಿಬಿರದಲ್ಲಿ ತರಬೇತಿ ನೀಡಲಾಗುವುದು. ಆಸಕ್ತರು 7019776749 ಅಥವಾ 9448954052ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಸುಭಾಷ್ಚಂದ್ರ ಬೋಸ್ ಯುವ ಟ್ರಸ್ಟ್ ಅಧ್ಯಕ್ಷ ಕೌತಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-42-277281825

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.