ಶಿವಮೊಗ್ಗ: ‘ಕಲಿಕೆ, ನವೀನತೆ ಮತ್ತು ಸೃಜನಶೀಲ ಚಿಂತನೆಯೇ ಯಶಸ್ವಿ ಎಂಜಿನಿಯರ್ನ ನಿಜವಾದ ಗುರುತು’ ಎಂದು ಜೆ.ಎನ್.ಎನ್ ಕಾಲೇಜಿನ ಕಾರ್ಯದರ್ಶಿ ಎಸ್.ಎನ್. ನಾಗರಾಜ ಹೇಳಿದರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಿಸ್ಟಿರಿಯೊ 6.0’ ರಾಜ್ಯಮಟ್ಟದ ತಾಂತ್ರಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲೆಕ್ಟ್ರಾನಿಕ್ಸ್ ಎಂದರೆ ಕೇವಲ ಸರ್ಕಿಟ್ಗಳು, ಮೈಕ್ರೊಪ್ರೊಸೆಸರ್ಗಳು ಅಥವಾ ಯಂತ್ರಗಳ ಅಧ್ಯಯನವಲ್ಲ. ಅದು ಕಾಣದ ಬುದ್ಧಿವಂತಿಕೆಯನ್ನು ಅರಿಯುವ ಪ್ರಯಾಣವಾಗಿದೆ. ಒಂದು ಸಣ್ಣ ಮೈಕ್ರೊಪ್ರೊಸೆಸರ್ ಕ್ಷಣಾರ್ಧದಲ್ಲಿ ಕೋಟ್ಯಂತರ ಕಾರ್ಯಗಳನ್ನು ನಿರ್ವಹಿಸುತ್ತದೆ. ಕಣ್ಣಿಗೆ ಕಾಣದ ಆ ಎಲೆಕ್ಟ್ರಾನಿಕ್ ವ್ಯವಸ್ಥೆಯೇ ಇಂದಿನ ಜಗತ್ತನ್ನು ಚಲಾಯಿಸುತ್ತಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಶೋಧನಾ ಡೀನ್ ಎಸ್.ವಿ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೇಮಾ ಕೆ.ಎನ್., ರೂಪಾ ಬಿ.ಎಸ್., ಸ್ಮಿತಾ ಎಸ್.ಎಂ., ವಿದ್ಯಾರ್ಥಿ ಸಂಯೋಜಕರಾದ ಅನಿರುದ್ಧ, ಪ್ರಾರ್ಥನಾ, ಸ್ಪೂರ್ತಿ, ವಿಕಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯದ 16 ಎಂಜಿನಿಯರಿಂಗ್ ಕಾಲೇಜುಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಾಬಿ ಪ್ರಾಜೆಕ್ಟ್, ರಿಕ್ರೂಟ್ ಎಕ್ಸ್, ಬಗ್ ಬೌಂಟಿ, ಇಂಡಸ್ಟ್ರಿ 4.0, ಪೇಪರ್ ಪ್ರೆಸೆಂಟೇಶನ್, ಹ್ಯಾಕ್-ಎಕ್ಸ್ ಹಾಗೂ ಎಂಜಿನಿಯರಿಂಗ್ ಎ ವೇ ಔಟ್ ಮೊದಲಾದ ಸ್ಪರ್ಧೆಗಳು ಗಮನ ಸೆಳೆದವು.

ಉದ್ಘಾಟನೆ ವಿಶೇಷ ಆಕರ್ಷಣೆ: ಕಾರ್ಯಕ್ರಮ ಉದ್ಘಾಟನೆ ವೇಳೆ ಎಲೆಕ್ಟ್ರಾನಿಕ್ಸ್ ಸರ್ಕಿಟ್ ಆಧಾರಿತವಾಗಿ ವಿನ್ಯಾಸಗೊಳಿಸಿದ್ದ ದೀಪಸ್ತಂಭವನ್ನು ಅತಿಥಿಗಳು ಮೊಬೈಲ್ ಆ್ಯಪ್ ಮೂಲಕ ಬಟನ್ ಒತ್ತಿ ಬೆಳಗಿಸಿದರು. ಕರ್ಪೂರ ಮತ್ತು ಬತ್ತಿಯ ಸಂಯೋಜನೆಯೊಂದಿಗೆ ತಂತ್ರಜ್ಞಾನದ ಮೂಲಕ ಪ್ರಜ್ವಲಿಸಿದ ದೀಪ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-42-1387916444

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.