ಶಿವಮೊಗ್ಗ: ‘ಜಾವಳ್ಳಿಯ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಮತ್ತು ಯುಕೆ ಮೂಲದ ಚಿಯಾಕ್ ಎಎಸ್ಐ ಸಹಭಾಗಿತ್ವದಲ್ಲಿ ಭಾರತದ ಮೊದಲ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮ ಪರಿಚಯಿಸಲಾಗುತ್ತಿದೆ’ ಎಂದು ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಕಿರಣ್ಕುಮಾರ್ ತಿಳಿಸಿದರು.

‘ಜಗತ್ತು ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸೂಪರ್ ಇಂಟೆಲಿಜೆನ್ಸ್ ಹಂತದತ್ತ ವೇಗವಾಗಿ ಸಾಗುತ್ತಿರುವ ಈ ಸಂದರ್ಭದಲ್ಲಿ ಭವಿಷ್ಯದ ತಂತ್ರಜ್ಞಾನಾಧರಿತ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಸಂಸ್ಥೆಯ ಪ್ರಮುಖ ಹೊಣೆಗಾರಿಕೆ ಆಗಿದೆ. ಆ ಹಾದಿಯಲ್ಲಿ ಶಾಲೆ ಹೆಜ್ಜೆ ಇಟ್ಟಿದೆ’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯ ಮೂಲತತ್ವಗಳು, ಸೂಪರ್ ಇಂಟೆಲಿಜೆನ್ಸ್ ಮತ್ತು ಅದರ ಸಾಮಾಜಿಕ ಪರಿಣಾಮ, ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರದ ಕೌಶಲ್ಯ, ಬೌದ್ಧಿಕ ವ್ಯವಸ್ಥೆಯ ನೈತಿಕ ಪ್ರಶ್ನೆಗಳು, ಭವಿಷ್ಯದ ತಂತ್ರಜ್ಞಾನಗಳಿಗೆ ಅಗತ್ಯ ಕೌಶಲ್ಯ ಪರಿಚಯಿಸಲಾಗುತ್ತದೆ ಎಂದು ತಿಳಿಸಿದರು.

‘ಮೇ 3ರಂದು ಶಾಲೆಯಲ್ಲಿ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮೇ ಎರಡನೇ ವಾರದಲ್ಲಿ ಸೂಪರ್ ಇಂಟೆಲಿಜೆನ್ಸ್ ವಿಷಯ ಪರಿಚಯಿಸುವ ವಿಶೇಷ ಶಿಬಿರ ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಮೊ.ಸಂ: 99000 15264ಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದರು.

ಚಿಯಾಕ್ ಎಎಸ್ಐ ಸಂಸ್ಥೆಯ ಸಿಇಒ ಚಂದ್ರಶೇಖರ್ ನಾಗರಾಜ್ ಮಾತನಾಡಿ, ‘ಸೂಪರ್ ಇಂಟೆಲಿಜೆನ್ಸ್ ಮಾನವ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನ ಪರಿವರ್ತನೆಯಲ್ಲಿ ಒಂದಾಗಿದೆ. ಇಂದಿನ ಎಐ ಮಟ್ಟಕ್ಕೆ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಸಾಕಾಗುವುದಿಲ್ಲ. ಭವಿಷ್ಯ ಗಮನದಲ್ಲಿಟ್ಟುಕೊಂಡ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ’ ಎಂದರು.

ಪ್ರತೀಕ್, ಸೈಯದ್ ಶಾ ಅಜೀಮ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-42-1912659547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.