ಶಿವಮೊಗ್ಗ: ಸಾಗರ ರಸ್ತೆಯಲ್ಲಿರುವ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನ ಎಂ.ಕಾಂ ವಿಭಾಗವು ಪಿಇಎಸ್ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ಮತ್ತು ಎಂ.ಬಿ.ಎ ವಿಭಾಗಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಸಮನ್ವಯ-2026’ ಅಂತರ ಕಾಲೇಜು ಫೆಸ್ಟ್ ಈಚೆಗೆ ಪ್ರೇರಣಾ ಕನ್ವೆನ್ಷನ್ ಹಾಲ್ನಲ್ಲಿ ಅದ್ದೂರಿಯಾಗಿ ಚಾಲನೆ ಪಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪಿಇಎಸ್ ಸಂಸ್ಥೆಯ ಕುಲಸಚಿವ ಪ್ರೊ.ಆರ್.ನಾಗರಾಜ್, ‘ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಫೂರ್ತಿ ಅತ್ಯಗತ್ಯ. ಶೈಕ್ಷಣಿಕ ಸಂಸ್ಥೆಯ ಉನ್ನತಿಯಲ್ಲಿ ವಿದ್ಯಾರ್ಥಿ ಸಮೂಹ, ಗುಣಮಟ್ಟದ ಶಿಕ್ಷಣ, ನೈಪುಣ್ಯವುಳ್ಳ ಅಧ್ಯಾಪಕರು ಹಾಗೂ ಉತ್ತಮ ಫಲಿತಾಂಶ ಮತ್ತು ಉದ್ಯೋಗಾವಕಾಶ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ತಿಳಿಸಿದರು.

‘ಅತ್ಯಂತ ಕಡಿಮೆ ಅವಧಿಯಲ್ಲಿ ಪಿಇಎಸ್ ಸಂಸ್ಥೆಯು ಈ ಎಲ್ಲಾ ಮಾನದಂಡಗಳಲ್ಲಿ ಸಾಧನೆ ಮಾಡಿ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಸಂಸ್ಥೆಯು ನಿರಂತರವಾಗಿ ಇಂತಹ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದೆ’ ಎಂದು ಹೇಳಿದರು.

ವೇದಿಕೆಯಲ್ಲಿ ಪಿಇಎಸ್ ಐಎಎಂಎಸ್ ಪ್ರಾಂಶುಪಾಲ ಜಿ.ಎಂ.ಸುದರ್ಶನ್, ಪಿಇಎಸ್ ಐಟಿಎಂ ಪ್ರಾಂಶುಪಾಲ ಪ್ರೊ.ಡಿ.ಆರ್. ಸ್ವಾಮಿ, ಉಪ ಪ್ರಾಂಶುಪಾಲ ಪ್ರೊ.ಆರ್.ಶಂಕರ್ ಉಪಸ್ಥಿತರಿದ್ದರು. ಸಂಚಾಲಕರಾದ ಟಿ.ಆರ್. ನಾಗರಾಜ್, ಪ್ರೊ.ಅರ್ಜುನ್, ಪ್ರೊ.ತೇಜಸ್ವಿನಿ ಹಾಗೂ ಎಸ್.ಡಿ.ಆರತಿ ಕುಮಾರ್ ಭಾಗವಹಿಸಿದ್ದರು.

ಈ ಬಾರಿಯ ಫೆಸ್ಟ್ನಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ ಒಟ್ಟು 48 ತಂಡಗಳು ಭಾಗವಹಿಸಿದ್ದವು. ಶ್ಯಾಮ್ ಪ್ರಾರ್ಥನಾ ಗೀತೆ ಹಾಡಿದರು. ತೃಪ್ತಿ ಎಸ್. ಭಟ್ ಸ್ವಾಗತಿಸಿದರು. ಪ್ರೇರಣಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಬಿ.ಸ್ನೇಹಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-42-2137211951

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.