ಸಿದ್ದಾಪುರ: ಅನಾಥ ಮಕ್ಕಳಿಗೆ ವಿದ್ಯೆ, ವಸತಿ, ದಾಸೋಹ ನೀಡಿದ ಸಿದ್ದಾಪುರದ ಮುಸ್ಲಿಂ ಅನಾಥಾಶ್ರಮ ಮಾದರಿಯಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಶ್ಲಾಘಿಸಿದರು.

ಸಿದ್ದಾಪುರದ ಮಹರೋಮ್ ಅಬ್ದುಲ್ ಮಜೀದ್ ಹಾಜಿ ನಗರದಲ್ಲಿ ನಡೆದ ಮುಸ್ಲಿಂ ಅನಾಥಾಶ್ರಮದ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ 50 ವರ್ಷಗಳ ಹಿಂದೇಯೇ ಅನಾಥಾಶ್ರಮ ನಿರ್ಮಿಸಲು ಅಂದಿನ ಹಿರಿಯರು ಮುಂದಾಲೋಚನೆ ಮಾಡಿರುವುದು ಶ್ಲಾಘನೀಯ. ಸಮಸಮಾಜದ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, 50 ವರ್ಷಗಳ ಹಿಂದೆ ಅನಾಥಾಶ್ರಮ ನಿರ್ಮಾಣಕ್ಕೆ ಸಹಕರಿಸಿದ ಹಾಗೂ ಸಮಾಜಕ್ಕೆ ಕೊಡುಗೆ ನೀಡಿದ ಹಿರಿಯರನ್ನು ಸ್ಮರಿಸುತ್ತಿರುವುದು ಶ್ಲಾಘನೀಯ. ಸಮಾಜದ ನಿರ್ಗತಿಕರಿಗೆ ಸಹಾಯ ಮಾಡಬೇಕು. ಅನಾಥಾಶ್ರಮಕ್ಕೆ ಆರ್ಥಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯದ್ ಮಹಮ್ಮದ್ ಜಿಫ್ರಿ ಮುತ್ತುಕೋಯ ತಂಙಲ್ ಮಾತನಾಡಿ, ಈಗಿನ ಕಾಲದಲ್ಲಿ ಅನಾಥಾಶ್ರಮವನ್ನು ನಡೆಸಿಕೊಂಡು ಹೋಗುವುದು ಕಷ್ಟವಾದರೂ, ಕಳೆದ 50 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ರೂಪಿಸಿದ ಕೀರ್ತಿ ಸಿದ್ದಾಪುರದ ಅನಾಥಾಶ್ರಮಕ್ಕೆ ಇದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಆಶ್ರಯ ನೀಡುವ ಗ್ರಾಮದ ಅಂದಿನ ಹಿರಿಯ ಮುಂದಾಲೋಚನೆ ಅನುಕರಣೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಮುಸ್ತಫಾ ಹಾಜಿ ವಹಿಸಿದ್ದರು. ಈ ಸಂದರ್ಭ ಜನಾಬ್ ರವೂಫ್ ಹಾಜಿ, ಶೈಖುನಾ ಎಂ.ಎಂ ಅಬ್ದುಲ್ಲಾ ಫೈಐಇ, ಅನ್ವರ್ ಮುಹಿಯುದ್ದೀನ್ ಹುದವಿ, ವರ್ಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ಕೆ.ಎ ಯಾಕೂಬ್, ಪೆರುಂಬಾಡಿ ಎಸ್.ಇ.ಎ ಅಧ್ಯಕ್ಷರಾದ ಬಷೀರ್ ಹಾಜಿ, ಕೆಪಿಸಿಸಿ ಸದಸ್ಯರಾದ ಹಸೈನಾರ್ ಹಾಜಿ, ಎಸ್ಎನ್ಡಿಪಿ ಜಿಲ್ಲಾ ಅಧ್ಯಕ್ಷ ವಿ.ಕೆ ಲೊಕೇಶ್, ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಕೆ.ಕೆ ಶ್ರೀನಿವಾಸ್, ಹಿರಿಯರಾದ ಅಜ್ಜಿಕುಟ್ಟಿರ ಸುಬ್ಬಯ್ಯ, ಪ್ರಮುಖರಾದ ನೌಫಲ್ ಹುದವಿ, ತಮ್ಲೀಕ್ ಧಾರಿಮಿ ಹಾಜರಿದ್ದರು. ಅನಾಥಾಶ್ರಮದ ಹಳೇ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-1309879731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.