ಸಿಂದಗಿ: ‘ನಮ್ಮ ಸಂಸ್ಥೆಯ ಪದವಿ ಕಾಲೇಜಿನಲ್ಲಿ ಸುದೀರ್ಘ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿದ್ದ ದಿವಂಗತ ಎಂ.ವಿ. ಗಣಾಚಾರಿ ಅವರ ಸ್ಮರಣಾರ್ಥ ಅವರ ಪತ್ನಿ ಗಂಗಾಬಾಯಿ ಗಣಾಚಾರಿಯವರು ಗ್ರಂಥಾಲಯಕ್ಕೆ 320 ಪುಸ್ತಕಗಳು ಮತ್ತು ಕಲಾ ವಿಭಾಗ ಅಂತಿಮ ವರ್ಷ ಐಚ್ಛಿಕ ಕನ್ನಡ ವಿಷಯದಲ್ಲಿ ಅಧಿಕ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗೆ ಪ್ರೋತ್ಸಾಹಧನ ನೀಡಲು ₹1ಲಕ್ಷ ದತ್ತಿ ಸ್ಥಾಪಿಸಿದ್ದಾರೆ’ ಎಂದು ಸಾರಂಗಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಪ್ರಶಂಸಿದರು.

ನಗರದ ಸಾರಂಗಮಠದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ವಹಿಸಿ ಮಾತನಾಡಿದರು.

‘ಪ್ರಾಧ್ಯಾಪಕ ಗಣಾಚಾರಿಯವರು ತಮ್ಮ ವಿದ್ವತ್ನಿಂದ ವಿದ್ಯಾರ್ಥಿಗಳ ಮನಸು ಗೆದ್ದಿದ್ದರು. ಪ್ರಸ್ತುತ ಇಂಥ ಪ್ರಾಧ್ಯಾಪಕರ ಅಗತ್ಯ ಇದೆ’ ಎಂದು ಆಶಯ ವ್ಯಕ್ತಪಡಿಸಿದರು.

ಕನ್ನಡ ವಿಷಯ ಪ್ರಾಧ್ಯಾಪಕ ನಾಗರಾಜ ಮುರಗೋಡ ಮಾತನಾಡಿ, ‘ಎಂ.ವಿ. ಗಣಾಚಾರಿಯವರು ಹಳಗನ್ನಡ ಬೋಧನೆಯಲ್ಲಿ ಎತ್ತಿದ ಕೈ. ಅವರು ಸಾಹಿತ್ಯ ಲೋಕಕ್ಕೆ ಹಲವಾರು ಮೌಲಿಕ ಗ್ರಂಥಗಳನ್ನು ನೀಡಿದ್ದಾರೆ’ ಎಂದರು.

ದೈಹಿಕ ಶಿಕ್ಷಣ ಪ್ರಾಧ್ಯಾಪಕ ರವಿ ಗೋಲಾ, ಪ್ರಾಚಾರ್ಯ ಡಿ.ಎಂ.ಸರಶೆಟ್ಟಿ, ಶಾಂತವೀರ ಗಣಾಚಾರಿ, ಗ್ರಂಥಪಾಲಕಿ ಶ್ರೀದೇವಿ ಸಿಂದಗಿ, ಶಿವಲೀಲಾ ವೀರಗಂಟಿಮಠ ಇದ್ದರು.

ಶಕುಂತಲಾ ಹಿರೇಮಠ ಗಾಯನ ಪ್ರಸ್ತುತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-1572464792

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.