ಸಿಂದಗಿ: ‘ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿಷ್ಠೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧಾರಿತ ಬೋಧನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಕ ಶಿವಶರಣ ಗುಗ್ಗರಿ ಆದರ್ಶಪ್ರಾಯರಾಗಿದ್ದಾರೆ. ಅವರ ಭಾಷಾ ಪ್ರಭುತ್ವ ಮೆಚ್ಚುವಂಥದ್ದು’ ಎಂದು ಮಾಜಿ ಶಾಸಕ ರಮೇಶ ಭೂಸನೂರ ಬಣ್ಣಿಸಿದರು.

ಇಲ್ಲಿಯ ಜ್ಯೋತಿ ನಗರ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಭಾನುವಾರ ದೇವರನಾವದಗಿ ಶ್ರೀಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಹಾಗೂ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿದ ಇನ್ನರ್ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ, ಶಾಸಕ ಅಶೋಕ ಮನಗೂಳಿಯವರ ಪತ್ನಿ ನಾಗರತ್ನಾ ಮನಗೂಳಿ ಮಾತನಾಡಿದರು.

ಸಾರಂಗಮಠ– ಗಚ್ಚಿನಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಆಶಿರ್ವಚನ ನೀಡಿದರು. ಮಹಾರಾಷ್ಟ್ದರ ಸೋಲಾಪುರದ ನಿವೃತ್ತ ಪ್ರಾಧ್ಯಾಪಕ ವಿಶ್ವನಾಥ ಶಿರಶ್ಯಾಡ ಅವರು ಶಿವಶರಣ ಗುಗ್ಗರಿಯರ ಬದುಕು–ಬರಹ ಕುರಿತಾಗಿ ಉಪನ್ಯಾಸ ನೀಡಿದರು.

ಭಾಗ್ಯ ಮುಳಸಾವಳಗಿ ಗುಗ್ಗರಿ, ಸಂಜನಾ ಗುಗ್ಗರಿ, ಭಟ್ಕಳದ ಶಿಕ್ಷಕಿ ರೂಪಾ ಗಾರ್ವಿ ಮಾತನಾಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸುಕ್ಷೇತ್ರ ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಎಸ್.ವಿ.ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕಿ ವನಜಾಕ್ಷಿ ಗುಗ್ಗರಿ, ವಿ.ಎಸ್.ಬಿರಾದಾರ, ಶಿವಶರಣ ಗುಂದಗಿ ಹಾಗೂ ಗೆಳಯರ ಬಳಗದ ಹಲವಾರು ಶಿಕ್ಷಕರಿಗೆ ವಿಶೇಷ ಸನ್ಮಾನ ನಡೆಯಿತು. ಎ.ವೈ.ಬಡಿಗೇರ, ಎಂ.ಜಿ.ಉಪ್ಪಾರ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-26-858465292

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.