ಶಿರಸಿ: ‘ಸಮಾಜದಿಂದ ಎಲ್ಲ ರೀತಿಯ ಸೌಲಭ್ಯ, ಪ್ರೋತ್ಸಾಹ ಹಾಗೂ ಅವಕಾಶಗಳನ್ನು ಪಡೆದುಕೊಂಡ ಪ್ರತಿಯೊಬ್ಬ ನಾಗರಿಕನೂ ಸಮಾಜಕ್ಕೆ ಮರಳಿ ಸೇವೆ ಸಲ್ಲಿಸುವ ಮೂಲಕ ತನ್ನ ಋಣ ತೀರಿಸಬೇಕು’ ಎಂದು ಗ್ಯಾರಂಟಿ ಯೋಜನಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಇಲ್ಲಿನ ಅರುಣೋದಯ ಸಂಸ್ಥೆಯು 20 ವರ್ಷ ಪೂರೈಸಿದ ಪ್ರಯುಕ್ತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಮರಣ ಸಂಚಿಕೆ ಬಿಡುಗಡೆ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆಂಬುಲೆನ್ಸ್ ಲೋಕಾರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ನಿರಂತರವಾಗಿ ಜನಸೇವೆ ಮಾಡುತ್ತಿರುವ ಅರುಣೋದಯ ಸಂಸ್ಥೆಯ ಕಾರ್ಯವೈಖರಿ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಶೇ 95ರಷ್ಟು ಅತ್ಯುನ್ನತ ಸಾಕ್ಷರತಾ ಪ್ರಮಾಣ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಇಂತಹ ಸೇವಾ ಮನೋಭಾವದ ಸಂಸ್ಥೆಗಳು ಮತ್ತಷ್ಟು ತಲೆ ಎತ್ತಬೇಕಾದ ಅಗತ್ಯವಿದೆ’ ಎಂದರು.

‘ಬಡ ಕುಟುಂಬಗಳ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಈ ಯೋಜನೆಗಳ ಲಾಭ ಪಡೆದು ಶೇ 9೦ರಷ್ಟು ಅಂಕ ಗಳಿಸಿದ್ದರೆ, ಅಂತಹವರ ಮಾಹಿತಿ ಕಲೆಹಾಕಿ ಶಾಸಕರ ಮೂಲಕ ಸನ್ಮಾನಿಸುವ ಕಾರ್ಯವಾಗಬೇಕು. ಸಮಾಜದ ತಳಮಟ್ಟದಲ್ಲಿ ಶ್ರಮಿಸುವ ಪೌರ ಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಅಂಚೆ ನೌಕರರನ್ನು ಗುರುತಿಸಿ ಗೌರವಿಸುತ್ತಿರುವುದು ಮತ್ತು ಬಡವರಿಗಾಗಿ ಆಂಬುಲೆನ್ಸ್ ಸೇವೆ ಆರಂಭಿಸಿರುವುದು ಶ್ಲಾಘನೀಯ’ ಎಂದರು.

ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ ಮಾತನಾಡಿ, ‘ಕೇವಲ ಸ್ವಾರ್ಥದ ಬದುಕು ಜೀವನಕ್ಕೆ ಅರ್ಥ ತರುವುದಿಲ್ಲ, ಬದಲಾಗಿ ನೂರಾರು ಕಷ್ಟದಲ್ಲಿರುವವರಿಗೆ ಬೆಳಕಾಗುವುದೇ ನಿಜವಾದ ಸಾರ್ಥಕತೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅರುಣೋದಯ ಸಂಸ್ಥೆಯ ಅಧ್ಯಕ್ಷ ಸತೀಶ ನಾಯ್ಕ, ‘ಮುಂದಿನ ದಿನಗಳಲ್ಲೂ ಸಂಸ್ಥೆಯು ಮತ್ತಷ್ಟು ದೃಢತೆಯೊಂದಿಗೆ ಜನಸೇವೆಯಲ್ಲಿ ನಿರತವಾಗಲಿದೆ’ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಗಣಪತಿ ಜೋಗಳೇಕರ, ನರೇಬೈಲ್ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಹೆಗಡೆ, ವೆಲ್ನೆಸ್ಟ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಮಂಜುನಾಥ ಬಿ.ಎ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನೇತ್ರಾವತಿ ಸಿರ್ಸಿಕರ, ಅರುಣೋದಯ ಸಂಸ್ಥೆಯ ಟ್ರಸ್ಟಿಗಳಾದ ಎ.ಕೆ.ನಾಯ್ಕ, ಸುಭಾಷ ಮಂಡೂರು, ಚಂದ್ರಕಾಂತ ಪವಾರ, ವಿನಾಯಕ ಶೇಟ್, ಸವಿತಾ ಮಂಡೂರು ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-20-886341250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.