ಸಿರುಗುಪ್ಪ: ‘ಗ್ರಾಮೀಣ ಭಾಗದ ಮಕ್ಕಳಿಗಾಗಿ ಅರಿವು ಗ್ರಂಥಾಲಯ ಕೇಂದ್ರದಲ್ಲಿ ಬೇಸಿಗೆ ಶಿಬಿ ನಡೆಯಲಿದ್ದು, ಕಲಿಕೆಗೆ ಸಹಕಾರಿಯಾಗುತ್ತದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳ ಹೇಳಿದರು.

ತಾಲ್ಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಏ.15ರಿಂದ ಏ.30 ರವರೆಗೆ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.

ಶಿಬಿರದಲ್ಲಿ ಗ್ರಾಮೀಣ ಆಟಗಳು, ಗಣಿತ, ಇಂಗ್ಲಿಷ್, ಇತಿಹಾಸ, ಓದುವ ಅಭ್ಯಾಸ, ವಾಕ್ಯ ರಚನೆ, ಚೆಸ್, ಚಿತ್ರ ಕಲೆ, ಕಲಾಕೃತಿಗಳ ಕಲಿಕೆ, ಕೇರಂ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ಉಪಯೋಗ ಪಡೆಯಬೇಕು ಎಂದು ಗ್ರಂಥಪಾಲಕ ವಿ.ಅಡಿವೆಪ್ಪ ತಿಳಿಸಿದ್ದಾರೆ.

ಪಂಚಾಯಿತಿ ಕಾರ್ಯದರ್ಶಿ ಬಸನಗೌಡ, ಸಿ.ಆರ್.ಪಿ. ಟಿ.ಶಾಂತ, ಆರ್.ಜಿ.ಪಿ. ಅಧಿಕಾರಿ ವೀಕ್ಷಿತ, ಹೊನ್ನಪ್ಪ, ನಾಗಪ್ಪ, ನಾಗರಾಜ, ರವಿ ಇದ್ದರು.

ತೆಕ್ಕಲಕೋಟೆ: ಸಮೀಪದ ಉತ್ತನೂರು ಗ್ರಾಮದ ಸಾರ್ವಜನಿಕ ಗ್ರಂಥಾಲಯ ಕೇಂದ್ರದಲ್ಲಿ ಚಿಣ್ಣರಿಗಾಗಿ ಉಚಿತ ಬೇಸಿಗೆ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯಿತಿ ಪಿಡಿಒ ಶಿವಕುಮಾರ ಮಾತನಾಡಿ, ‘ಮೊಬೈಲ್ ಎಂಬ ಕೂಪದಲ್ಲಿ ಮುಳುಗಿ ಮಂಡೂಕಗಳಾಗದೆ, ಜ್ಞಾನವೆಂಬ ಗ್ರಂಥಾಲಯ ಸಾಗರದಲ್ಲಿ ಪುಸ್ತಕ ಓದುವ ಮೂಲಕ ಜ್ಞಾನಿಗಳಾಗಿ’ ಎಂದರು.

ಗ್ರಾ.ಪಂ. ಕಾರ್ಯದರ್ಶಿ ಕೆ.ಶಿವಮೂರ್ತಿ, ಶಿಕ್ಷಕ ಕಿರಣ್, ಗ್ರಂಥಪಾಲಕ ಚಂದ್ರಶೇಖರ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-25-539089495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.