ಸಿರುಗುಪ್ಪ: ಮನುಷ್ಯನಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ, ಆರ್ಥಿಕ ಸೌಲಭ್ಯವನ್ನು ಸಮಾಜದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾಮನೋಭಾವದಿಂದ ನೀಡುವುದೇ ಸಮಾಜ ಸೇವೆ’ ಎಂದು ನಗರಸಭೆಯ ಪೌರಾಯುಕ್ತ ಕೆ.ಗಂಗಾಧರ ಹೇಳಿದರು.

ನಗರದ ಡ್ರೈವರ್ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ‘ಎ’ ಮತ್ತು ‘ಬಿ’ ಘಟಕ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.

ವಿಕಸಿತ ಭಾರತದೆಡೆಗೆ ಯುವಜನತೆ ಸಾಗಬೇಕಾದರೆ ಸಮರ್ಪಣ ಭಾವದಿಂದ ಸಮಾಜಸೇವೆ ಮಾಡುವುದನ್ನು ಕುಟುಂಬದಿಂದಲೇ ಕಲಿತಾಗ ಮಾತ್ರ ಸಮಾಜದ ವ್ಯವಸ್ಥೆ ಸುಧಾರಿಸಲು ಸಾಧ್ಯ. ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ಈ ವೇಳೆ ನಗರಸಭೆಯ ಸಮುದಾಯ ಸಂಘಟಕರು ಕಸ ವಿಂಗಡಣೆ ಕುರಿತು ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು. ಪ್ರಾಂಶುಪಾಲ ಕೃಷ್ಣಪ್ಪ, ಎಸ್ಡಿಎಂಸಿ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎನ್.ಸಿದ್ದಪ್ಪ, ನಗರಸಭೆಯ ಸಹಾಯಕ ಕಾರ್ಯಪಾಲ ಅಭಿಯಂತರ ದಿಲೀಪ್, ಶಿಬಿರ ಅಧಿಕಾರಿಗಳಾದ ಡಾ.ಕೆ.ಎಂ.ಚಂದ್ರಕಾಂತ್, ಪಂಪಾಪತಿ ಬಕಾಡೆ, ಸಹ ಶಿಬಿರಧಿಕಾರಿ ಟಿ.ಎಸ್.ಪ್ರಶಾಂತ್ ಬಾಬು, ಉಪನ್ಯಾಸಕರಾದ ರಾಮಣ್ಣ ಪೂಜಾರಿ, ಎನ್.ಸುರೇಶ್, ನರೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-25-703869267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.