ಸೋಮವಾರಪೇಟೆ: ‘ರಾಷ್ಟ್ರೀಯ ಸೇವಾ ಶಿಬಿರವು ವಿದ್ಯಾರ್ಥಿ ದಿಸೆಯಲ್ಲಿಯೇ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಲು ಒಂದು ವೇದಿಕೆ ಕಲ್ಪಿಸಿಕೊಡುತ್ತದೆ. ಎಲ್ಲ ವಿದ್ಯಾರ್ಥಿಗಳು ಅದರಲ್ಲಿ ಪಾಲ್ಗೊಳ್ಳುವ ಮೂಲಕ ಅದನ್ನು ಬಳಸಿಕೊಳ್ಳಬೇಕು’ ಎಂದು ಉದ್ಯಮಿ ಮಹೇಶ್ ಗುರಪ್ಪ ಹೇಳಿದರು.

ಯಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಯಡೂರಿನ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಪ್ರಾರಂಭವಾದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಯುವಶಕ್ತಿಯು ಸರಿಯಾದ ರೀತಿಯಲ್ಲಿ ಬಳಕೆಯಾದರೆ ಮಾತ್ರ ಮಹತ್ತರ ಕಾರ್ಯ ಸಾಧಿಸಬಹುದು. ನಮ್ಮ ಜೀವನವನ್ನು ಸುವ್ಯವಸ್ಥಿತವಾಗಿ ನಡೆಸಲು ಇದು ಸಹಕಾರಿಯಾಗಲಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಡಿ. ಹರ್ಷ ಮಾತನಾಡಿ, ‘ಸೇವೆ ಮಾಡಲು ಎನ್.ಎಸ್.ಎಸ್. ಒಂದು ಸದವಕಾಶ ಕಲ್ಪಿಸುತ್ತದೆ. ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಮುಂದೆ ಬರಲು ಉತ್ತಮ ವೇದಿಕೆ ಇದಾಗಿದೆ’ ಎಂದು ಹೇಳಿದರು.

ಕಾಲೇಜಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಎಂ.ಎಸ್. ಶಿವಮೂರ್ತಿ ಪ್ರಾಸ್ತವಿಕವಾಗಿ ಮಾತನಾಡಿದರು. ಇಂದಿನ ದಿನಕ್ಕೆ ಶಾಂತಿಯುತ ಸಹಬಾಳ್ವೆ, ಅಹಿಂಸೆ, ಪರಸ್ಪರ ಪ್ರೀತಿ ಸಹಕಾರ ನಮ್ಮ ಇಂದಿನ ಜೀವನದಲ್ಲಿ ತುರ್ತು ಅಗತ್ಯ ಇದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುಶೀಲ ಹಾನಗಲ್ಲು, ದಳವಾಯಿ ರಾಜು, ಕಾಲೇಜಿನ ಐ.ಕ್ಯು.ಎ.ಸಿ. ಸಂಚಾಲಕರಾದ ಎಂ.ಎಂ. ಸುನೀತ, ಪ್ರಾಧ್ಯಾಪಕರಾದ, ಪಿ. ಪಾವನಿ, ಎಚ್. ಹುಚ್ಚೇಗೌಡ, ಬಿ.ಎಸ್. ವಿನೋದ, ಗುರುಪ್ರಸಾದ್, ಆದಿಲ್, ಪದ್ಮಾವತಿ, ರಾಜಾ ನಾಯಕ್, ದಿವ್ಯ, ಎಚ್.ಜೆ. ಜವರಪ್ಪ ಮತ್ತು ಸಂಧ್ಯ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-51-1583707296

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.