ಸೋಮವಾರಪೇಟೆ: ಮಹಿಳೆಯರು ಶಕ್ತಿಯ ಪ್ರತಿರೂಪ. ಅವರು ಕೇವಲ ಕುಟುಂಬದ ಆಧಾರಸ್ತಂಭ ಮಾತ್ರವಲ್ಲ, ಸಮಾಜದ ಅಭಿವೃದ್ಧಿಯ ಪ್ರಮುಖ ಶಕ್ತಿ. ಆದ್ದರಿಂದ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ನೀಡುವುದು ಎಂದರೆ ಸಮಗ್ರ ಸಮಾಜದ ಅಭಿವೃದ್ಧಿಗೆ ದಾರಿ ತೆರೆದಂತಾಗುತ್ತದೆ ಎಂದು ಇನ್ನರ್ ವ್ಹೀಲ್ ಅಧ್ಯಕ್ಷೆ ತನ್ಮಯೀ ಪ್ರವೀಣ್ ಅಭಿಪ್ರಾಯಪಟ್ಟರು.

ರೋಟರಿ ಸಂಸ್ಥೆಯ ವತಿಯಿಂದ ಮಂಗಳವಾರ ರೋಟರಿ ಭವನದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಹಿಳೆಯರ ತೇಜೋವಧೆ, ಚಾರಿತ್ರ್ಯವಧೆ ಆದಾಗ ಸಮಾಜ ಅದನ್ನು ಖಂಡಿಸಿ ಹಾಗೂ ವಿರೋಧಿಸುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಮತ್ತು ಇದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಕೂಡ. ಅಲ್ಲದೆ, ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳು ಆಡುವುದು ಸರಿಯಲ್ಲ. ಮಹಿಳೆಯರು ಸದಾ ತಮ್ಮ ಕುಟುಂಬಕ್ಕೆ, ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಪ್ರೀತಿ, ಸಹನೆ, ಸೇವಾ ಮನೋಭಾವ ಮತ್ತು ತ್ಯಾಗವನ್ನು ಕೊಟ್ಟು ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಮಹಿಳೆಯರಿಗೆ ಅವಕಾಶ, ಗೌರವ ಮತ್ತು ಬೆಂಬಲ ನೀಡಿದಾಗ ಸಮಾಜವು ಇನ್ನಷ್ಟು ಪ್ರಗತಿಪರವಾಗುತ್ತದೆ ಎಂದರು.

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಅತ್ಯಂತ ಅರ್ಥಪೂರ್ಣವಾದ ಕೊಡುವುದರಿಂದ ಪಡೆಯುವುದು ಎಂಬ ವಿಷಯದಡಿ ಆಚರಿಸುತ್ತಿರುವುದು ತುಂಬಾ ಸಂತೋಷದ ಸಂಗತಿ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ, ನಾವು ಎಲ್ಲರೂ ಒಟ್ಟಾಗಿ ಮಹಿಳೆಯರ ಗೌರವವನ್ನು ಹೆಚ್ಚಿಸಲು, ಅವರ ಸಾಮರ್ಥ್ಯವನ್ನು ಬೆಂಬಲಿಸಲು ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸಲು ಸಂಕಲ್ಪವನ್ನು ಮಾಡಬೇಕು. ಯಾವುದೇ ಮಹಿಳೆಯರ ಸಾಧನೆಯ ಹಿಂದೆ ಪುರುಷನ ನೆರಳಿರುತ್ತದೆ. ನಮ್ಮ ಹಿಂದೆ ನೆರಳಾಗಿ ನಿಂತು ನಮ್ಮ ಸಾಧನೆಗಳ ಪಾಲುದಾರರಾಗಿ ಪುರುಷರು ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷೆ ವೀಣಾ ಮನೋಹರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಸೇನಾನಿ ರಾಖೇಶ್ ಪಟೇಲ್, ವಲಯ ಸೇನಾನಿ ಎ.ಎಸ್. ಮಲ್ಲೇಶ್, ರೋಟರಿ ನೂತನ ಅಧ್ಯಕ್ಷ ಬಿ.ಎಸ್. ಸುಂದರ್, ಕಾರ್ಯದರ್ಶಿ ಡಿ.ಪಿ. ರಮೇಶ್ ಇದ್ದರು. ಮಹಿಳೆಯರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-51-155170607

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.