ಸೊರಬ: ‘ಶುಶ್ರೂಷಕಿಯರ ಕಾಯಕವು ತಾಯಿಯ ಕೆಲಸ ಇದ್ದಂತೆ. ಹೀಗಾಗಿ ಈ ಕೆಲಸವನ್ನು ಬರೀ ದುಡಿಮೆಯ ದೃಷ್ಟಿಯಲ್ಲಿ ನೋಡಬಾರದು’ ಎಂದು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞ ನಾಗೇಂದ್ರಪ್ಪ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಎಚ್ಪಿಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಶುಶ್ರೂಷಕಿಯರ ದಿನ, ಲ್ಯಾಪ್ ಲೈಟಿಂಗ್ ಮತ್ತು ಜಿಎನ್ಎಂ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವೆ ಪರಿಗಣಿಸಿ ಅವರ ಜನ್ಮ ದಿನದ ವಾರ್ಷಿಕೋತ್ಸವದ ನಿಮಿತ್ತ ಶುಶ್ರೂಷಕಿಯರ ದಿನವನ್ನು ಆಚರಿಸಲಾಗುತ್ತಿದೆ. ಅವರು ಪ್ರತಿಯೊಬ್ಬ ಶುಶ್ರೂಷಕಿಯರಿಗೆ ಮಾದರಿಯಾಗಿದ್ದು, ಅವರ ಮಾರ್ಗದಲ್ಲಿ ಮುನ್ನಡೆಯಬೇಕು’ ಎಂದರು.

ಶುಶ್ರೂಷಕಿಯರಾದ ಅರುಂಧತಿ, ಜಯಲಕ್ಷ್ಮಿ, ಎಲಿಸಮ್ಮ ಸೀಮಾನಾಯಕ್, ರಶ್ಮಿ, ಶ್ವೇತಾ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಂಶುಪಾಲರಾದ ಜಿ.ಭಾಗ್ಯಾ, ಡಾ. ಪ್ರಭು ಸಾಹುಕಾರ್, ಡಾ. ನಾಗರಾಜ್ ನಾಯಕ್, ಡಾ.ಗುಡ್ಡಪ್ಪ, ಡಾ.ಶ್ರೀಕೃಷ್ಣ, ಡಾ.ಹರ್ಷವರ್ಧನ್, ಸಿ.ಕೆ ಬಲೀಂದ್ರಪ್ಪ, ಎಚ್.ಕೆ ಶಿಲ್ಪಾ, ಜ್ಯೋತಿ ಸೇರಿ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-42-1550983747

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.